News

NSP ವಿದ್ಯಾರ್ಥಿ ವೇತನ : ಪ್ರತಿ ತಿಂಗಳು ಹಣ ಸಿಗುತ್ತೆ

NSP Scholarship Funded every month

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಎನ್ ಎಸ್ ಪಿ ಸ್ಕಾಲರ್ಶಿಪ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಹಾಗಾಗಿ ಈ ಲೇಖನವನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಸಹ ಸಂಪೂರ್ಣವಾಗಿ ಓದಬೇಕಾಗುತ್ತದೆ.

NSP Scholarship Funded every month
NSP Scholarship Funded every month

ಎನ್ ಎಸ್ ಪಿ ಸ್ಕಾಲರ್ಶಿಪ್ ಮಾಹಿತಿ :

ಭಾರತ ಸರ್ಕಾರವು ರಾಷ್ಟ್ರೀಯ ವಿದ್ಯಾರ್ಥಿ ವೇತನವನ್ನು ನೀಡಲು ಎನ್ ಎಸ್ ಪಿ ಯನ್ನು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಡೆಯುವ ಸೌಲಭ್ಯವನ್ನು ಒದಗಿಸಿದೆ.

ಅಧಿಕೃತ ವೆಬ್ಸೈಟ್ ಬಗ್ಗೆ ಮಾಹಿತಿ :

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅರ್ಜಿಯು ಅಧಿಕೃತ ವೆಬ್ಸೈಟಿನಲ್ಲಿ ಚಾಲ್ತಿಯಲ್ಲಿದೆ ನೀವು ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು . ಅಧಿಕೃತ ವೆಬ್ಸೈಟ್ ಹೀಗಿದೆ: https://scholarship.gov.in

ಯಾವ ವರ್ಗದವರು ಅರ್ಜಿ ಸಲ್ಲಿಸಬಹುದು:

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು .ಈ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಸರ್ಕಾರವು ಹಣ ಜಮಾ ಮಾಡಲಿದೆ. ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ .ಈ ಮೂಲಕ ನೀವು ಎಲ್ಲಾ ದಾಖಲೆಗಳನ್ನು ಒದಗಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.


ಇದನ್ನು ಓದಿ : ಬ್ಯಾಂಕ್ ಖಾತೆ ಹೊಂದಿರುವವರು ಡಿ.31ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕು

ಯಾವ ಅಗತ್ಯ ದಾಖಲೆಗಳು ಬೇಕು :

ಅರ್ಜಿ ಸಲ್ಲಿಸಲು ನಿಮಗೆ ಶೈಕ್ಷಣಿಕ ವರ್ಷದ ಅಂಕಪಟ್ಟಿ ಬೇಕು ಹಾಗೂ ಗುರುತಿನ ಚೀಟಿ ಬೇಕು ಇದರೊಂದಿಗೆ ಆದಾಯ ಪ್ರಮಾಣ ಪತ್ರ ಬೇಕು ಹಾಗೂ ಜಾತಿ ಪ್ರಮಾಣ ಪತ್ರ ಬೇಕು ನಿಮ್ಮ ಬ್ಯಾಂಕ್ ಪುಸ್ತಕ ಆಧಾರ್ ಕಾರ್ಡ್ ಇನ್ನಿತರೆ ಅಗತ್ಯ ದಾಖಲೆಗಳನ್ನು ಒದಗಿಸಿ ಕೊಳ್ಳಿ.

ವಾರ್ಷಿಕ ಆದಾಯದ ಬಗ್ಗೆ ಮಾಹಿತಿ ಕುಟುಂಬದ ವಾರ್ಷಿಕ ಆದಾಯ ಎರಡುವರೆ ಲಕ್ಷಕ್ಕಿಂತ ಹೆಚ್ಚಿರಬಾರದು. ಇದರೊಂದಿಗೆ ನೀವು ಕನಿಷ್ಠ ಇಂದಿನ ಪರೀಕ್ಷೆಯಲ್ಲಿ 50ರಷ್ಟು ಅಂಗಗಳೊಂದಿಗೆ ತೇರ್ಗಡೆ ಹೊಂದಿರಬೇಕಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು ನೋಡಿ :

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳಿಗೆ ಅದರಲ್ಲಿ ಆರರಿಂದ 10ನೇ ತರಗತಿ ಓದುತ್ತಿದ್ದರೆ ಆ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವಾಗಿ 500 ರೂಪಾಯಿಗಳನ್ನು ಕೊಡುತ್ತಾರೆ .ಇದರೊಂದಿಗೆ ಪ್ರತಿ ತಿಂಗಳು ಸಹ 350 ಬೋಧನಾ ಶುಲ್ಕವನ್ನು ಪಡೆಯಬಹುದಾಗಿದೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...