News

ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಿಗೆ 1. 5 ಲಕ್ಷ, ಶ್ರಮಿಕ ಸುಲಭ್ ಆವಾಸ್ ಯೋಜನೆಯಲ್ಲಿ ಸಿಗಲಿದೆ

Own house for workers

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಶ್ರಮಿಕ ಸುಲಭ ಆವಾಸ್ ಯೋಜನೆಯ ಅಡಿಯಲ್ಲಿ ಸಹಾಯಧನ ಲಭ್ಯವಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಿಗೆ ಸ್ವಂತ ಮನೆಯನ್ನು ಹೊಂದುವ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ 1.5 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವನ್ನು ಕಾರ್ಮಿಕರು ಪಡೆಯಬಹುದಾಗಿದೆ.

Own house for workers
Own house for workers

ಶ್ರಮಿಕ ಸುಲಭ್ ಆವಾಸ್ ಯೋಜನೆಯ ಮುಖ್ಯ ಉದ್ದೇಶ :

ಬಡ ಕಾರ್ಮಿಕರಿಗೆ ಶಾಶ್ವತ ಮನೆಗಳನ್ನ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ವಾಗಿದೆ. ಕಾರ್ಮಿಕರು ತಮ್ಮ ಮತ್ತು ತಮ್ಮ ಕುಟುಂಬದವರ ಸದಸ್ಯರಿಗೆ ಒಂದು ಸುರಕ್ಷಿತ ಮತ್ತು ಆರಾಮದಾಯಕವಾದ ವಾಸ ಸ್ಥಳವನ್ನು ಈ ಯೋಜನೆ ಮೂಲಕ ಸಹಾಯಧನವನ್ನು ಪಡೆದು ಒಂದು ಸ್ವಂತ ಸೂರನ್ನು ಪಡೆಯಬಹುದಾಗಿದೆ.

ಯೋಜನೆಗೆ ಇರುವ ಅರ್ಹತೆಗಳು :

ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕಾರ್ಮಿಕ ಇಲಾಖೆಯಲ್ಲಿ ಅರ್ಜಿದಾರರು ಒಂದು ವರ್ಷ ಮುಂಚಿತವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿರಬೇಕು. ಸ್ವಂತ ಭೂಮಿಯನ್ನು ಮನೆ ನಿರ್ಮಿಸಲು ಹೊಂದಿರಬೇಕು. ಎಪ್ಪತ್ತು ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರಬೇಕು. ಭಾರತದ ಕಾಯಂ ನಿವಾಸಿ ಆಗಿರಬೇಕು.

ಇದನ್ನು ಓದಿ : ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು


ಯೋಜನೆಯ ಮೊತ್ತ :

ಕಾರ್ಮಿಕರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಈ ಯೋಜನೆ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ. ನೆರವು ಪಡೆದು ನಿರ್ಮಿಸಿಕೊಳ್ಳಲು ಸಹಾಯವಾಗುತ್ತದೆ. ಬಡ ಕಾರ್ಮಿಕರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯು ಸಹ ಯೋಜನೆಯಿಂದ ಸುಧಾರಿಸುತ್ತದೆ.

ಹೀಗೆ ಶ್ರಮಿಕ ಸುಲಭ ಅವಾಸ್ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಸ್ವಂತ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ನೀಡುತ್ತಿದ್ದು ಈ ಬಗ್ಗೆ ನಿಮಗೆ ತಿಳಿದಿರುವ ಕಾರ್ಮಿಕ ಸ್ನೇಹಿತರು ಹಾಗೂ ಬಂಧುಮಿತ್ರರಿಗೆ ಶೇರ್ ಮಾಡುವ ಮೂಲಕ ಸ್ವಂತ ಮನೆಯಲ್ಲಿ ನಿರ್ಮಿಸಲು 1.5 ಲಕ್ಷದವರೆಗೆ ಸಹಾಯಧನ ಲಭ್ಯವಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...