ನಮಸ್ಕಾರ ಸ್ನೇಹಿತರೆ ಪಾನ್ ಕಾರ್ಡ್ ಕುರಿತಂತೆ ಕೇಂದ್ರ ಸರ್ಕಾರವು ಹಲವು ಆದೇಶಗಳನ್ನು ಈಗಾಗಲೇ ಹೊರಡಿಸಿದ್ದು ದೇಶದ ಹಣಕಾಸಿನ ಪ್ರಮುಖ ದಾಖಲೆಯಾಗಿ ಪಾನ್ ಕಾರ್ಡ್ ಅನ್ನು ನೋಡಬಹುದಾಗಿದೆ ಹಾಗಾಗಿ ಯಾವುದೇ ವಹಿವಾಟುಗಳು ನಡೆಯಬೇಕಾದರೆ ಪಾನ್ ಕಾರ್ಡ್ ಮೂಲಕವೇ ನಡೆಯಬೇಕು ಇಲ್ಲದಿದ್ದರೆ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಅದೇ ರೀತಿ ಪ್ರತಿ ವರ್ಷ ಟ್ಯಾಕ್ಸ್ ಕಟ್ಟುವವರು ಸಹ ಕೆಲವರು ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ತಿಳಿದುಕೊಂಡಿರುವುದು ಅತಿ ಅಗತ್ಯವಾಗಿರುತ್ತದೆ.
ತೆರಿಗೆ ಪಾವತಿ ಮಾಡುವವರಿಗೆ ಅಗತ್ಯ ದಾಖಲೆ :
ತೆರಿಗೆ ಪಾವತಿ ಮಾಡುವವರಿಗೆ ಪಾನ್ ಕಾರ್ಡ್ ಅಗತ್ಯ ದಾಖಲೆಯಾಗಿದ್ದು ತೆರಿಗೆಯನ್ನು ಪಾನ್ ಕಾರ್ಡ್ ಇಲ್ಲದೆ ಪಾವತಿಸಲು ಸಾಧ್ಯವಾಗುವುದಿಲ್ಲ ಇನ್ನು ಆಧಾರ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸದೆ ಇದ್ದರೆ ನಿಮ್ಮ ಪಾನಕ ನಿಷ್ಕ್ರಿಯ ವಾಗುತ್ತದೆ. ಸದ್ಯ ಇದೀಗ ಪಾನ್ ಕಾರ್ಡ್ ಕುರಿತಂತೆ ಆದಾಯ ತೆರಿಗೆ ಇಲಾಖೆಯು ಹೊಸ ನಿಯಮವನ್ನು ಜಾರಿಗೆ ತಂದಿದ್ದು ಈ ಕೆಲಸವನ್ನು ಪಾನ್ ಕಾರ್ಡ್ ಹೊಂದಿರುವ ಜನರು ಮಾಡದೇ ಇದ್ದರೆ ತೆರಿಗೆಯನ್ನು ಮುಂದಿನ ವರ್ಷ ಹೆಚ್ಚಿಗೆ ಪಾವತಿ ಮಾಡಬೇಕಾಗುತ್ತದೆ.
ತಕ್ಷಣವೇ ಈ ಕೆಲಸ ಮಾಡುವುದು ಸೂಕ್ತ :
ತಕ್ಷಣವೇ ಈ ಕೆಲಸವನ್ನು ಪಾನ್ ಕಾರ್ಡ್ ಇರುವವರು ಮಾಡುವುದು ಸೂಕ್ತ ಏನೆಂದರೆ ಆಧಾರ್ ಲಿಂಕ್ ಎಷ್ಟು ಮುಖ್ಯ ಪಾನ್ ಕಾರ್ಡ್ ಗೆ ಎಂಬುದನ್ನ ಜನರ ಗಮನಕ್ಕೆ ಆದಾಯ ಇಲಾಖೆಯು ತಂದಿದೆ. ಯಾವುದೇ ರೀತಿಯ ಮನೆಯನ್ನು ಅಥವಾ ಆಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ನಾವು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಅದರಂತೆ ಟಿಡಿಎಸ್ ರೂಪದಲ್ಲಿ ಶುಲ್ಕವನ್ನು ತೆರಿಗೆ ನಿಯಮಗಳ ಪ್ರಕಾರ ಪಾವತಿಸಬೇಕಾಗುತ್ತದೆ ಹೀಗಾಗಿ ಆಧಾರ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಆಸ್ತಿ ಅಥವಾ ಮನೆ ಖರೀದಿ ಮಾಡಲು ಕಷ್ಟವಾಗುತ್ತದೆ ಹಾಗಾಗಿ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡನ್ನು ತೆರಿಗೆ ಪಾವತಿದಾರರು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಇದನ್ನು ಓದಿ : ಪಿಎಂ ಕಿಸಾನ್ ಫಲಾನುಭವಿಗಳಿಗೆ ಗುಡ್ ನ್ಯೂಸ್: ಈ ಯೋಜನೆಯಲ್ಲಿ ಹೊಸ ಟ್ವಿಸ್ಟ್ ತಂದ ಕೇಂದ್ರ..!!
2024ರಲ್ಲಿ ದುಬಾರಿ ತೆರಿಗೆ ಕಟ್ಟಬೇಕು :
50 ಲಕ್ಷ ಅಥವಾ ಕಿತ್ತ ಹೆಚ್ಚಿನ ಮೌಲ್ಯದ ಯಾವುದೇ ಆಸ್ತಿಯನ್ನು ಖರೀದಿ ಮಾಡುವವರು ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಒಂದು ಪ್ರತಿಶತ ಟಿಡಿಎಸ್ ಕೇಂದ್ರ ಸರ್ಕಾರಕ್ಕೆ ಮತ್ತು ಮಾರಾಟಗಾರರಿಗೆ ಒಟ್ಟು ವೆಚ್ಚದ 99 ಪ್ರತಿಶತವನ್ನು ಪಾವತಿಸಬೇಕೆಂದು ತಿಳಿಸಲಾಗಿದ್ದು ಮೊದಲು ಆಸ್ತಿಯನ್ನು ನೋಂದಾಯಿಸಿಕೊಳ್ಳುವ ಮುಂಚೆ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಏನಾದರೂ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇದ್ದರೆ ಶೇಕಡ ಒಂದರ ಬದಲಿಗೆ ಶೇಕಡ 20ರಷ್ಟು ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ.
ಹೀಗೆ ಹೊಸ ನಿಯಮದ ಪ್ರಕಾರ ಆದಾಯ ತೆರಿಗೆ ಪಾವತಿ ಮಾಡುವವರು ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ಇದರಿಂದ ಹೆಚ್ಚಿನ ತೆರಿಗೆಯನ್ನು ಪಾವತಿಸುವುದು ನಿಮಗೆ ತಪ್ಪುತ್ತದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಯಾರಾದರೂ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಅವರಿಗೆ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ: ಪ್ರತಿಯೊಬ್ಬರ ಖಾತೆಗೆ 1000 ರೂ. ಜಮಾ..! ಕೂಡಲೇ ಚೆಕ್ ಮಾಡಿ
- ಬಿಎಡ್ ಕೋರ್ಸ್ ರಾಜ್ಯ ಸರ್ಕಾರದಿಂದ ಸಂಪೂರ್ಣ ಉಚಿತ : ಅರ್ಹತೆ ಏನು?