ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈತ ಸಂಘ ಸರ್ಕಾರಕ್ಕೆ ಕೆಲವೊಂದು ಬೇಡಿಕೆಗಳನ್ನು ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕೃಷ್ಣ ಮತ್ತು ತುಂಗಭದ್ರ ನದಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರನ್ನು ಒದಗಿಸುವುದು ಹಾಗೂ ಬೆಳೆ ಪರಿಹಾರ ಹಣವಾಗಿ ಪ್ರತಿ ಎಕರೆಗೆ 30 ಸಾವಿರ ರೂಪಾಯಿಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಡಿಸೆಂಬರ್ 30ರಂದು ಮನವಿ ಸಲ್ಲಿಸಲಾಗುತ್ತದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮಾಹಿತಿ :
ಡಿಸೆಂಬರ್ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘವು ಮನವಿಯನ್ನು ಸಲ್ಲಿಸಲು ನಿರ್ಧರಿಸಿದೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶರಣಪ್ಪ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಆಗಮಿಸಲಿದ್ದು ರೈತರ ಮನವಿ ಸ್ವೀಕರಿಸದೆ ಹೋದರೆ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷರು ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ್ದಾರೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ರೈತರ ಕೆಲವು ಬೇಡಿಕೆಗಳು :
ಕೈಗಾರಿಕೆಗಳಿಗೆ ಅಕ್ರಮವಾಗಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಹರಿಸಲಾಗುತ್ತಿದೆ ಕೈಗಾರಿಕೆಗಳಿಗೆ ಅಕ್ರಮವಾಗಿ ನೀಡುವುದಕ್ಕೆ ಸಾಧ್ಯವಾಗುತ್ತದೆ ಆದರೆ ರೈತರಿಗೆ ಮಾತ್ರ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಏತ ನೀರಾವರಿ ಯೋಜನೆಯಿಂದ ಜಿಂದಾಲ್ ಕಂಪನಿಗೆ ನೀರನ್ನು ಹರಿಸಲಾಗುತ್ತಿದೆ ಆದರೆ ರೈತರನ್ನು ಜಲಾಶಯದಲ್ಲಿ ನೀರಿಲ್ಲವೆಂದು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಅದರಂತೆ ಕೆಲವೊಂದು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ರಾಜ್ಯ ರೈತ ಸಂಘವು ಇಟ್ಟಿದೆ ಅವುಗಳೆಂದರೆ, 18 ತಾಸು ವಿದ್ಯುತ್ ನೀಡಲು ರೈತರಿಗೆ ಸರ್ಕಾರ ತೀರ್ಮಾನಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸರ್ಕಾರಿ ಸೇವೆಗಳನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವ ಬದಲಿಸಲು ಕ್ರಮ ವಹಿಸಬೇಕೆಂದು ಕೆಲವೊಂದು ರಾಜ್ಯ ಸರ್ಕಾರದ ಮುಂದಿಟ್ಟರು.
ಹೀಗೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶರಣಪ್ಪ ಅವರು ರಾಜ್ಯ ಸರ್ಕಾರಕ್ಕೆ ಕೆಲವೊಂದು ಬೇಡಿಕೆಗಳನ್ನು ಪೂರೈಸುವಂತೆ ಡಿಸೆಂಬರ್ 30ರಂದು ಮನವಿಯನ್ನು ಸಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ ಹಾಗಾಗಿ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು