ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರ ವ್ಯವಸಾಯಕ್ಕೆ ಅನುಕೂಲವಾಗಲಿ ಎಂದು ಧನಸಹಾಯ ಒದಗಿಸುವ ಮೂಲಕ ಹಣದ ಮೊತ್ತವನ್ನು ಹೆಚ್ಚಿಸಲು ಯೋಚಿಸಿದೆ. ಬಗ್ಗೆ ವರದಿಯು ಕೂಡ ವರ್ಷದ ಹಿಂದೆಯೇ ಕೇಳಿ ಬರುತ್ತಿತ್ತು ವರ್ಷಕ್ಕೆ ಒಟ್ಟು 6,000ಗಳನ್ನು ಈ ಮೊದಲು ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಒದಗಿಸುತ್ತಿತ್ತು ಆದರೆ ಇದೀಗ ಈ ಹಣವನ್ನು 8000 ಗಳಿಗೆ ಹೆಚ್ಚಿಸಬಹುದೆಂದು ತಿಳಿಸುತ್ತಿದೆ ಅಂದರೆ ನಾಲ್ಕು ಕಂತುಗಳಲ್ಲಿ ಹಣವನ್ನು ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ನೀಡಲು ಚಿಂತನೆ ನಡೆಸಿದೆ.
PM ಕಿಸಾನ್ ಯೋಜನೆಯ ಲಾಭಗಳು :
ದೇಶದ ಎಲ್ಲಾ ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆ pm ಕಿಸಾನ್ ಯೋಜನೆಯಾಗಿದ್ದು ಪ್ರತಿ ವ್ಯಕ್ತಿಗೆ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯು 5 ಕೆಜಿ ಆಹಾರ ಧಾನ್ಯಗಳನ್ನ ಒದಗಿಸುತ್ತದೆ.
ಹಣ ಹೆಚ್ಚಿಸಲು ಮುಖ್ಯ ಕಾರಣ :
ಕೇಂದ್ರ ಸರ್ಕಾರವು ಫೆಬ್ರವರಿ 2024 ಮತ್ತು ಮಾರ್ಚ್ 2024ರ ನಡುವೆ 16ನೇ ಕಂತಿನ ಹಣವನ್ನು ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿ ದಂತೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಅಧಿಕೃತ ಪ್ರಕಟಣೆಯನ್ನು ಒದಗಿಸಿಲ್ಲ. ನವೆಂಬರ್ 15 2018 ರಂದು 15ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿತು ಈ ನಡುವೆ ಮಧ್ಯಂತರ ಬಜೆಟ್ ನಲ್ಲಿ 2024 ರಲ್ಲಿ ಬಡವರು ರೈತರು ಯುವಕರು ಮತ್ತು ಮಹಿಳೆಯರಿಗೆ ಹೆಚ್ಚುವರಿ ಬೆಂಬಲ ಕ್ರಮಗಳನ್ನು ಒದಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು ಮೂಲಗಳ ಪ್ರಕಾರ ಹಣಕಾಸಿನ ನೆರವನ್ನು ಸರ್ಕಾರಿ ಇಲಾಖೆಗಳು ಸೂಕ್ಷ್ಮ ಸಣ್ಣ ಮತ್ತು ಮಾಧ್ಯಮ ಉದ್ಯಮಗಳಿಗೆ ಹೆಚ್ಚಿಸುವ ಉದ್ದೇಶದಿಂದ ಕೆಲವೊಂದು ಯೋಜನೆಗಳನ್ನು ರೂಪಿಸುತ್ತಿವೆ.
ಇದನ್ನು ಓದಿ : ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ : ತಿಂಗಳಿಗೆ 15,000 ಹಣ ಪಡೆಯಿರಿ
ರಾಜಸ್ಥಾನದಲ್ಲಿ 12 ಸಾವಿರ ಹೆಚ್ಚಳ :
ಈ ಹಿಂದೆ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ರಾಜಸ್ಥಾನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅರ್ಜಿ ಸಲ್ಲಿಸಿರುವ ರಾಜಸ್ಥಾನದ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಆ ರೈತರಿಗೆ 12,000ಗಳನ್ನು ವರ್ಷಕ್ಕೆ ನೀಡಲಾಗುತ್ತದೆ ಎಂಬುದರ ಮಾಹಿತಿಯನ್ನು ರೈತರಿಗೆ ತಿಳಿಸಿದ್ದಾರೆ.
ಹೀಗೆ ರಾಜಸ್ಥಾನದಲ್ಲಿ ಚುನಾವಣೆ ಇರುವ ಕಾರಣ ರೈತರ ಪಿಎಂ ಕಿಸಾನ್ ನಿಧಿ ಯೋಜನೆಯ ಹಣವನ್ನು ಹೆಚ್ಚು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿಯೂ ಕೂಡ ರೈತರಿಗೆ ಪಿಎಂ ಕಿಸಾನ್ ನಿಧಿ ಯೋಜನೆಯ ಹಣ ಹೆಚ್ಚಳ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇತರೆ ವಿಷಯಗಳು :
- ಒಂದು ಲಕ್ಷ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ತಿಳಿದಿದೆಯಾ ?
- ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಕುಡಿಯುವವರಿಗೆ ಎಚ್ಚರಿಕೆ!!! ನಿಮಗೆ ಏನೆಲ್ಲಾ ಸಮಸ್ಯೆ ಬರುತ್ತೆ ನೋಡಿ