ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಸರ್ಕಾರದಿಂದ ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡುತ್ತಿರುವವರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ದೇಶದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿ ಕೊಡುವುದಕ್ಕಾಗಿ ಭಾರತ ಸರ್ಕಾರವು 1985ರಲ್ಲಿ ಇಂದಿರಾಗಾಂಧಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿತ್ತು.
ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರು ಮನೆಯನ್ನು ಕಟ್ಟಿಕೊಳ್ಳಲು ಆರ್ಥಿಕ ನೆರವನ್ನು ನೀಡಲಾಗಿತ್ತು. ಅಂತ ಇದೀಗ ಮತ್ತೊಮ್ಮೆ ಮನ ಸೌಲಭ್ಯವನ್ನು ಪಡೆದುಕೊಳ್ಳುವವರು ಆರ್ಥಿಕ ಸೌಲಭ್ಯ ಸಿಗದೇ ಇರುವವರಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನಾ ಎನ್ನುವ ಹೆಸರಿನಲ್ಲಿ 2015ರಲ್ಲಿ ಜಾರಿಗೆ ತಂದಿದ್ದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ :
ಕೇಂದ್ರ ಸರ್ಕಾರವು 2015ರಲ್ಲಿ ಇಂದಿರಾಗಾಂಧಿ ಆವಾಸ್ ಯೋಜನೆ ಎಂಬ ಹೆಸರನ್ನು ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಹೊಸದಾಗಿ ನಾಮಕರಣ ಮಾಡಿ ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಈ ಯೋಜನೆ ಮೂಲಕ ಹೊಸದಾಗಿ ಮನೆ ಕಟ್ಟಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಬಡತನದಲ್ಲಿ 2024ರ ವರ್ಷ ಮುಗಿಯುವ ವೇಳೆಗೆ ಸ್ವಂತ ಮನೆ ಇಲ್ಲದೆ ಇರುವಂತಹ ಜನರಿಗೆ ಮನೆ ನಿರ್ಮಿಸುವ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜನರಿಗೆ ಸಿಗುವ ಸಹಾಯಧನದ ಮೊತ್ತ ಆವಾಸ್ ಯೋಜನೆಯ ಮೂಲಕ ಹೆಚ್ಚಾಗುತ್ತಿದೆ ಎಂದು ಸ್ವತಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊತ್ತ :
ಪ್ರಧಾನಮಂತ್ರಿ ಆವಾಸ್ ಯೋಜನೆ ಪ್ರಯೋಜನವನ್ನು ಪಡೆಯಬೇಕಾದರೆ ಅರ್ಜಿದಾರರ ವಾರ್ಷಿಕ 3 ಲಕ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯಲ್ಲಿ ಎರಡು ಕೋಟಿ ಗಿಂತ ಹೆಚ್ಚು ಮನೆಗಳನ್ನು ಸರ್ಕಾರವು ನಿರ್ಮಾಣ ಮಾಡಬೇಕೆಂದು ಯೋಜನೆಯನ್ನು ಹಾಕಿಕೊಂಡಿದ್ದು ರಾಷ್ಟ್ರೀಯ ನಗರ ಅಭಿವೃದ್ಧಿ ಫoಡ್ ನಲ್ಲಿ 60,000 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಡಲಾಗಿದೆ. 1.20 ಲಕ್ಷ ರೂಪಾಯಿಗಳನ್ನು ಹಳ್ಳಿಗಳಲ್ಲಿ ಮನೆ ನಿರ್ಮಿಸುವುದಕ್ಕಾಗಿ ಹಾಗೂ 2.5 ಲಕ್ಷ ರೂಪಾಯಿಗಳನ್ನು ನಗರ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಮೊತ್ತವನ್ನು ನಿಗದಿಪಡಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಆಸಕ್ತ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಗೆ ಈ ಡೈರೆಕ್ಟ್ ಲಿಂಕ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. https://pmaymis.gov.in/ಈ ವೆಬ್ ಸೈಟಿಗೆ ಭೇಟಿ ನೀಡಿ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹೀಗೆ ಕೇಂದ್ರ ಸರ್ಕಾರವು 2015ರಲ್ಲಿ ಇಂದಿರಾಗಾಂಧಿ ಆವಾಸ್ ಯೋಜನೆಗೆ ಮರುನಾಮಕರಣ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಇಲ್ಲದವರಿಗೆ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ನೀಡುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು:
- ಗ್ಯಾರಂಟಿ 8000 ರೂ ವಿದ್ಯಾರ್ಥಿವೇತನ ಸಿಗುತ್ತೆ ,ಈ ದಾಖಲೆ ಬೇಕು ನೋಡಿ
- ಸಿರಿ ಸಂಪತ್ತು 2024ರ ಹೊಸ ವರ್ಷಕ್ಕೆ ಹೆಚ್ಚಾಗಬೇಕಾ? ನೀವು ಈ ಕೆಲಸ ಖಂಡಿತಾ ಮಾಡಬೇಕು