ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯ 2023 24 ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಅದರಂತೆ ಡಿಸೆಂಬರ್ 1ರಿಂದ ಡಿಸೆಂಬರ್ 15ರವರೆಗೆ ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ :
ದ್ವಿತೀಯ ಪಿಯುಸಿ ಪರೀಕ್ಷೆಯು 2024ರ ಮಾರ್ಚ್ 2 ರಿಂದ ಮಾರ್ಚ್ 22 ರವರೆಗೆ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ. ಅದರಂತೆ ಕನ್ನಡ ಅರೇಬಿಕ್ ಮಾರ್ಚ್ ಎರಡರಂದು ನಡೆಯಲಿದ್ದು, ಇತಿಹಾಸ ಭೌತಶಾಸ್ತ್ರ ಮಾರ್ಚ್ 4, ಮಾಹಿತಿ ತಂತ್ರಜ್ಞಾನ ರೆಟೈಲ್ ಆಟೋಮೊಬೈಲ್ ಹೆಲ್ತ್ ಕೇರ್ ಬ್ಯೂಟಿ ಅಂಡ್ ಹೆಲ್ತ್ ಮಾರ್ಚ್ ಐದರಂದು, ಸಮಾಜಶಾಸ್ತ್ರ ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ ಮಾರ್ಚ್ 6ರಂದು, ಹಿಂದಿ ಮಾರ್ಚ್ 7ರಂದು, ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಮಾರ್ಚ್ 9, ಇಂಗ್ಲಿಷ್ ಮಾರ್ಚ್ 11, ತಮಿಳು ತೆಲುಗು ಮಲಯಾಳಂ ಮರಾಠಿ ಉರ್ದು ಸಂಸ್ಕೃತ ಫ್ರೆಂಚ್ ಮಾರ್ಚ್ 12, ತರ್ಕಶಾಸ್ತ್ರ ಬಿಸಿನೆಸ್ ಸ್ಟಡೀಸ್ ಮಾರ್ಚ್ 13, ಗಣಿತ ಶಿಕ್ಷಣ ಶಾಸ್ತ್ರ ಮಾರ್ಚ್ 14, ಭೂಗೋಳ ಶಾಸ್ತ್ರ ಜೀವಶಾಸ್ತ್ರ ಮಾರ್ಚ್ 16, ಹಿಂದುಸ್ತಾನಿ ಸಂಗೀತ ಸೈಕಾಲಜಿ ಕೆಮೆಸ್ಟ್ರಿ ಮೂಲ ಗಣಿತ ಮಾರ್ಚ್ 18, ಐಚ್ಚಿಕ ಕನ್ನಡ ಅಕೌಂಟೆನ್ಸಿ ಜಿಯಾಲಜಿ ಗೃಹವಿಜ್ಞಾನ ಮಾರ್ಚ್ 20, ಅರ್ಥಶಾಸ್ತ್ರ ಮಾರ್ಚ್ 22ರಂದು ದ್ವಿತೀಯ ಪಿಯುಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನು 2023 24ರ ವೇಳಾಪಟ್ಟಿಯ ಪ್ರಕಾರ ಪ್ರಕಟಿಸಲಾಗಿದೆ.
ಇದನ್ನು ಓದಿ : ಗ್ರಾಹಕರ ಜೇಬಿಗೆ ಕತ್ತರಿ :5ನಿಯಮಗಳು ಡಿಸೆಂಬರ್ 1ರಿಂದ ಬದಲಾಗಲಿದೆ
ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ :
ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು 2023 24ರ ವೇಳಾಪಟ್ಟಿಯ ಪ್ರಕಾರ ನೋಡಬಹುದಾಗಿದೆ. ಅದರಂತೆ ರಾಜ್ಯ ಸರ್ಕಾರವು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಲಿದ್ದು ಇದೊಂದು ಕೇವಲ ತಾತ್ಕಾಲಿಕ ವೇಳಾಪಟ್ಟಿ ಎಂದು ತಿಳಿಸಲಾಗಿದ್ದು ಮುಂದೆ ಕಾದು ನೋಡಬೇಕಾಗಿದೆ.
ಹೀಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಈ ತಾತ್ಕಾಲಿಕ ವೇಳಾಪಟ್ಟಿಯನ್ನು ನಿಮ್ಮ ಸ್ನೇಹಿತರ ಮಕ್ಕಳು ಯಾರಾದರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮಾಡುತಿದ್ದರೆ ಅವರಿಗೆ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ