News

ಸಿಹಿ ಸುದ್ದಿ : ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ರಾಗಿ ಮುದ್ದೆ, ಯಾವ ಸಮಯಕ್ಕೆ ನೋಡಿ

Ragi Mudde will be available at Indira Canteen

ನಮಸ್ಕಾರ ಸ್ನೇಹಿತರೆ ಸಂಕ್ರಾಂತಿಯ ನಂತರ ಇಂದಿರಾ ಕ್ಯಾಂಟೀನ್ ನಲ್ಲಿ ಅಂದರೆ ಜನವರಿ 2024 ಆಹಾರ ಸೇವಿಸುವವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ ಕೂಡ ನೀಡಲು ರಾಜ್ಯ ಸರ್ಕಾರವು ತೀರ್ಮಾನ ಮಾಡಿದೆ.

Ragi Mudde will be available at Indira Canteen
Ragi Mudde will be available at Indira Canteen

ಇಂದಿರಾ ಕ್ಯಾಂಟೀನ್ ಮತ್ತೆ ಪುನರಾರಂಭ :

ಇಂದಿರಾ ಕ್ಯಾಂಟೀನ್ ಕರ್ನಾಟಕ ರಾಜ್ಯದಲ್ಲಿ ಬಹಳ ಫೇಮಸ್ ಆಗಿದ್ದು ಅತಿ ಕಡಿಮೆ ಬೆಲೆಗೆ ಬಡವರು ಬೆಳಗಿನ ಉಪಹಾರ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿತ್ತು. ಆದರೆ ಬಿಜೆಪಿ ಸರ್ಕಾರ ಇದ್ದಾಗ ಈ ಇಂದಿರಾ ಕ್ಯಾಂಟೀನ್ ಅನ್ನು ಸ್ಥಗಿತಗೊಳಿಸಲಾಗಿತ್ತು ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದಿದ್ದು ಸ್ಥಗಿತಗೊಂಡಿರುವ ಈ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಪುನರಾರಂಭಿಸಿದೆ. ಅದರಂತೆ ಇದೆ ಇಂದಿರಾ ಕ್ಯಾಂಟೀನ್ ನಲ್ಲಿ ಮೆನು ಬದಲಾಗಲಿದ್ದು ಉಪಹಾರ ಹಾಗೂ ಊಟಕ್ಕೆ ಕೊಡುವ ಆಹಾರಗಳ ಮೆನು ಇಂದಿರಾ ಕ್ಯಾಂಟೀನ್ ನಲ್ಲಿ ಲಿಮಿಟ್ ಆಗಿದೆ. ಅಂದರೆ ಬೇರೆ ಹೋಟೆಲ್ಗಳಲ್ಲಿ ಇರುವಂತೆ ಹೆಚ್ಚಿನ ಆಹಾರಗಳ ಆಯ್ಕೆ ಇದರಲ್ಲಿ ಇರುವುದಿಲ್ಲ ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಇಂದಿರಾ ಕ್ಯಾಂಟೀನ್ ಮೆನು ಬದಲಾಯಿಸಲು ತೀರ್ಮಾನ ಮಾಡಿದೆ.

ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ

2024 ರಿಂದ ರಾಗಿ ಮುದ್ದೆ :

ಇಂದಿರಾ ಕ್ಯಾಂಟೀನ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಕ್ರಾಂತಿಯ ನಂತರ ಅಂದರೆ ಜನವರಿ 2024ರ ನಡುವೆ ರಾಗಿ ಮುದ್ದೆ ಸೇವಿಸುವವರಿಗೆ ರಾಗಿಮುದ್ದೆ ನೀಡಲು ನಿರ್ಧಾರ ಮಾಡಲಾಗಿದೆ. ಅದರಂತೆ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ಇಂದಿರಾ ಕ್ಯಾಂಟೀನ್ ನಲ್ಲಿ ರಾಗಿಮುದ್ದೆ ನೀಡುವ ಸಾಧ್ಯತೆ ಇದೆ. ಆದರೆ ಈ ಹೊಸ ಮೆನು ಕೊಡುವ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿರುವುದರಿಂದ ಸರ್ಕಾರ ಟೆಂಡರ್ ಇಡುವ ಬಗ್ಗೆ ಚಿಂತನೆಯನ್ನು ನಡೆಸಿದೆ.

ಇಂದಿರಾ ಕ್ಯಾಂಟೀನ್ ಸ್ಥಾಪನೆ :


ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ಕಾರ್ಮಿಕ ವರ್ಗದವರಿಗಾಗಿಯೇ ಆಹಾರವನ್ನು ಅತಿ ಕಡಿಮೆ ಬೆಲೆಗೆ ಒದಗಿಸುವ ಸಲುವಾಗಿ ಈ ಇಂದಿರ ಕ್ಯಾಂಟೀನ್ ಅನ್ನು ಆರಂಭಿಸಿದರು. ಆದರೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 2018ರಲ್ಲಿ ಸರ್ಕಾರ ಬದಲಾದ ನಂತರ ಬೇಕಾದಂತಹ ಹಣಕಾಸಿನ ಕೊರತೆಯಿಂದ ಇಂದಿರ ಕ್ಯಾಂಟೀನ್ ಅನ್ನು ಸ್ಥಗಿತಗೊಳಿಸಬೇಕಾಯಿತು ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಪುನರ್ ಆರಂಭಿಸಿದೆ.

ಕಾಂಗ್ರೆಸ್ ಸರ್ಕಾರ 2017ರಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಮತ್ತೆ ಪುನರಾರಂಭವಾಗಿದ್ದು ಇದೊಂದು ರೀತಿಯಲ್ಲಿ ಬಡವರಿಗೆ ಹಾಗೂ ಕಾರ್ಮಿಕ ವರ್ಗದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಆಹಾರ ಸೇವಿಸುವಂತಹ ವ್ಯವಸ್ಥೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಇಂದಿರಾ ಕ್ಯಾಂಟೀನ್ ಸಾಕಷ್ಟು ಉಪಯೋಗಗಳನ್ನು ಬಡವರಿಗೆ ಹಾಗೂ ನಿರ್ಗತಿಕ ಜನರಿಗೆ ಆಹಾರವನ್ನು ನೀಡುವ ಸಲುವಾಗಿ ಸ್ಥಾಪನೆಯಾಗಿದ್ದು ಸಾಕಷ್ಟು ಉಪಯೋಗಗಳನ್ನು ಸಹ ನೀಡುತ್ತಿದೆ ಹಾಗಾಗಿ ರಾಜ್ಯ ಸರ್ಕಾರದ ಹಸಿವು ಮುಕ್ತ ಕರ್ನಾಟಕಕ್ಕೆ ಇದೊಂದು ರೀತಿಯಲ್ಲಿ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಇಂದಿರಾ ಕ್ಯಾಂಟೀನ್ ಮತ್ತೆ ಪುನರಾರಂಭವಾಗಿದೆ ಹಾಗೂ ಹೊಸ ಮೆನು ಆರಂಭವಾಗಿದೆ ಎಂಬುದರ ಬಗ್ಗೆಯೂ ಸಹ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...