ನಮಸ್ಕಾರ ಸ್ನೇಹಿತರೇ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನರು 224 ರಂದು ಭವ್ಯ ರಾಮಮಂದಿರದ ಉದ್ಘಾಟನೆಗೆ ಮುಂಚಿತವಾಗಿ ಜನರಿಗೆ ರಾಮಲಲ್ಲ ಪ್ರತಿಷ್ಠಾಪನ ಸಮಾರಂಭಕ್ಕೆ ಆಹ್ವಾನ ಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದರಂತೆ ಯಾರಿಗೆಲ್ಲ ಈ ಆಹ್ವಾನ ನೀಡಲಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಪೂರ್ಣವಾಗಿ ತಿಳಿದುಕೊಳ್ಳಬಹುದು.
ರಾಮ್ ಲಲ್ಲ ಪ್ರತಿಷ್ಠಾಪನ ಸಮಾರಂಭ :
ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಗಳು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಳುಹಿಸುತ್ತಿರುವ ಪತ್ರಗಳನ್ನು ತೋರಿಸಿವೆ. ಶ್ರೀ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು ಆರು ಸಾವಿರ ಜನರಿಗೆ ಸರ್ಕಾರವು ಪತ್ರಗಳನ್ನು ಕಳುಹಿಸಲಾಗುತ್ತದೆ. ರಾಮಮಂದಿರದ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗವಹಿಸಲಿದ್ದಾರೆ.
ಇದನ್ನು ಓದಿ : ರೈತರ ಸಾಲ ಮನ್ನಾ : ಅಧಿಕೃತ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಅಂಚೆಯ ಮೂಲಕ ಪತ್ರ :
ಸಂತರೊಬ್ಬರು ಈ ಸಮಾರಂಭಕ್ಕೆ ಟ್ರಸ್ಟ್ ಕಳುಹಿಸಿದ ಮೊದಲ ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಅಂಚೆಯ ಮೂಲಕ ಪತ್ರವನ್ನು ಪಡೆದಿದ್ದು ಮೊದಲ ವ್ಯಕ್ತಿ ಆಹ್ವಾನ ಹೊಂದಿರುವುದಕ್ಕೆ ಆಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ಬರದಿಂದ ದೇವಾಲಯದ ನಿರ್ಮಾಣದ ಕಾರ್ಯಗಳು ಸಾಗುತ್ತಿದ್ದು ಮೂರು ಆವೃತ್ತಿಗಳನ್ನು ರಾಮಲಲ್ಲಾ ದಲ್ಲಿ ತಯಾರಿಸಲಾಗುತ್ತದೆ. ಉದ್ಘಾಟನಾ ದಿನಾಂಕದ ಸಮೀಪದಲ್ಲಿ ಅವುಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ವರದಿ ಮಾಡಲಾಗಿದೆ. ಯಾರಿಗೂ ಹೋಗಲು ಅವಕಾಶವಿಲ್ಲದ ಸ್ಥಳಗಳಲ್ಲಿ ರಾಮ್ ಲಲ್ಲಾ ದ ಮೂರು ಆವೃತ್ತಗಳನ್ನು ತಯಾರಿಸಲಾಗುತ್ತಿದೆ.
ಜನವರಿ ಮೂರನೇ ವಾರದಲ್ಲಿ ಪ್ರತಿಷ್ಠಾಪನೆ :
2024ರ ಜನವರಿ 3ನೇ ವಾರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಖಜಾಂಚಿ ಸ್ವಾಮಿ ಗೋವಿಂದ್ ದೇವಗಿರಿ ಮಹಾರಾಜ್ ರಾಮ್ ಲಲ್ಲ ವಿಗ್ರಹವನ್ನು ಅದರ ಮೂಲ ಸ್ಥಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈಯಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು. ಟ್ರಸ್ಟ್ ರಾಮ ಮಂದಿರದ ಗ್ರೌಂಡ್ ವರ್ಕ್ ಚಿತ್ರಗಳನ್ನ ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 2020 ರಂದು ದೇವಾಲಯದ ಅಡಿಪಾಯ ಹಾಕಿದ್ದರು ಎಂದು ಹೇಳಲಾಗಿದೆ.
ಹೀಗೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನ ಸಮಾರಂಭಕ್ಕೆ ಜನರಿಗೆ ಆಹ್ವಾನ ಪತ್ರಗಳನ್ನು ನೀಡಿದ್ದು ಈ ಮೂಲಕ ಜನರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂಬುದು ಎಲ್ಲರ ಉದ್ದೇಶವಾಗಿದೆ ಹಾಗಾಗಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ರಾಜ್ಯದಲ್ಲಿ 48 ಗಂಟೆ ಭಾರೀ ಮಳೆಯ ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು
ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್