ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಉದ್ಯೋಗ ಆಕಾಂಕ್ಷಿಗಳಿಗೆ ಶೀಘ್ರದಲ್ಲಿಯೇ ಸಿಹಿಸುದ್ದಿಯನ್ನು ನೀಡಲಿದೆ. ಕರ್ನಾಟಕ ಸರ್ಕಾರವು ವಿವಿಧ ಇಲಾಖೆಗಳ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದು ಇದರಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಗಳ ನೇಮಕಾತಿ ಸಹ ನಡೆಯಲಿದ್ದು ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಪಿಡಿಒ ಕಾರ್ಯದರ್ಶಿ ಹುದ್ದೆಗಳಿದ್ದು ಗ್ರಾಮ ಲೆಕ್ಕಿಗ ಹುದ್ದೆ ಕಂದಾಯ ಇಲಾಖೆ ವ್ಯಾಪ್ತಿಗೆ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡಲು ಬರುತ್ತದೆ.
ಗ್ರಾಮ ಲೆಕ್ಕಾಧಿಕಾರಿ :
ಕಂದಾಯ ಸಚಿವ ಕೃಷ್ಣಭೈರವಡೆ ಅವರು ಗ್ರಾಮಲೆಕ್ಕಿಗೆ ಹುದ್ದೆಗಳ ಬಗ್ಗೆ ಮಾತನಾಡಿದ್ದು ಶೀಘ್ರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿಯೂ ಕೂಡ ಒಪ್ಪಿಗೆ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
1500 ಲೆಕ್ಕಾಧಿಕಾರಿ ಹುದ್ದೆಗಳು ವಿವಿಧ ಜಿಲ್ಲೆಗಳಲ್ಲಿ ಖಾಲಿ ಇದ್ದು ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಅದರ ಜೊತೆಗೆ 357 ಸರ್ವೆಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಸಹ ನಡೆಯುತ್ತಿದ್ದು ಸಂಪುಟ ಸಭೆಯಲ್ಲಿ 590 ಹುದ್ದೆಗಳ ನೇಮಕಾತಿಗೆ ಅನುಮತಿ ಪಡೆಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಹುದ್ದೆ ಆದೇಶ :
ಗ್ರಾಮ ಆಡಳಿತ ಅಧಿಕಾರಿಯಂದು ಗ್ರಾಮ ಲೆಕ್ಕದ ಹುದ್ದೆಯನ್ನು ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಪುನಃ ಪದನಾಮಿಕರಿಸಿ ಆದೇಶ ಹೊರಡಿಸಿತು. ಆದರೆ ಇದರ ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು.
ಎಲ್ಲಾ ಪ್ರಾದೇಶಿಕ ಆಯುಕ್ತರಿಂದ ಗ್ರಾಮ ಲೆಕ್ಕಿಗ ಹುದ್ದೆಯ ಪರಿಣಾಮ ಬದಲಾವಣೆ ಬಗ್ಗೆ ಅಭಿಪ್ರಾಯ ಕೋರಲಾಗಿತ್ತು. ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಬಹುದೆಂದು ನಾಲ್ಕು ಪ್ರಾದೇಶಿಕ ಆಯುಕ್ತರುಗಳು ವರದಿ ಸಲ್ಲಿಸಿದ್ದರು ಈ ವರದಿಯ ಆಧಾರದ ಮೇಲೆಯೇ ಗ್ರಾಮ ಲೆಕ್ಕಿಗ ಎಂಬ ಪದನಾಮ ಬದಲಾವಣೆ ಮಾಡಲಾಗಿತ್ತು.
ಇದನ್ನು ಓದಿ :ಜನವರಿ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿದೆಯಾ : ಕೂಡಲೇ ಚೆಕ್ ಮಾಡಿಕೊಳ್ಳಿ
ಹುದ್ದೆಯ ವೇತನ ಶ್ರೇಣಿ ನೇಮಕ ವಿಧಾನ :
ಕಂದಾಯ ಇಲಾಖೆಯಲ್ಲಿರುವ ಗ್ರಾಮ ಲೆಕ್ಕಿಗರ ಹುದ್ದೆಯ ವೇತನ ಶ್ರೇಣಿ ನೇಮಕಾತಿ ವಿಧಾನ ಹಾಗೂ ಅವರು ನಿರ್ವಹಿಸುವಂತಹ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದೆ ಗ್ರಾಮ ಆಡಳಿತ ಅಧಿಕಾರಿ ಎಂದು ಗ್ರಾಮಲೆಕ್ಕಿಗರನ್ನು ಮರು ನಾಮಪದನಿಕರಿಸಿ ಆದೇಶ ಹೊರಡಿಸಲಾಗಿತ್ತು.
ಗ್ರಾಮ ಮಟ್ಟಕ್ಕೆ ಕಂದಾಯ ಇಲಾಖೆಯ ಯೋಜನೆಗಳನ್ನು ತಲುಪಿಸುವಾದ ಮಹತ್ತರವಾದ ಹುದ್ದೆ ಹೀಗಾಗಿದ್ದು ಸರ್ಕಾರದ ಗ್ರಾಮೀಣ ಮಟ್ಟದಲ್ಲಿರುವ ಅಧಿಕಾರಿ ಎಂದರೆ ಗ್ರಾಮ ಲೆಕ್ಕಿಗ.
ಹೀಗೆ ಗ್ರಾಮಲೆಕ್ಕಿಗ ಎಂಬ ಪದನಾಮವನ್ನು ಬದಲಾಯಿಸಿ ಗ್ರಾಮ ಆಡಳಿತ ಅಧಿಕಾರಿ ಎಂದು ನಮ್ಮರು ನಾಮಕರಣ ಮಾಡಿ ಖಾಲಿ ಇರುವ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಸರ್ಕಾರವು ಶೀಘ್ರದಲ್ಲಿಯೇ ನೇಮಕಾತಿ ಹೊರಡಿಸುತ್ತದೆ ಹಾಗಾಗಿ ಈ ಬಗ್ಗೆ ಎಲ್ಲರಿಗೂ ಶೇರ್ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುದ್ದೆಗಳ ನೇಮಕಾತಿ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೂಗಲ್ ಪೇ ಬಳಸುವವರು ತಿಂಗಳಿಗೆ 111 EMI ಕಟ್ಟಿದರೆ ನಿಮಗೆ ಸಾಲ ಸಿಗುತ್ತೆ ನೋಡಿ
- ರೈತರ ಖಾತೆಗೆ 25 ಲಕ್ಷ ಬರ ಪರಿಹಾರದ ಹಣ ಜಮ : ಸಂಪೂರ್ಣವಾಗಿ ತಿಳಿದುಕೊಳ್ಳಿ