ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಯುಜಿ ಹಾಗೂ ಪಿಜಿ ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿದೆ. 226 ಹುದ್ದೆಗಳ ನೇಮಕಾತಿಗೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟಲಿಜೆನ್ಸ್ ಬ್ಯೂರೋ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಮತ್ತು ಟೆಕ್ ಎಕ್ಸಾಮ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಏನೆಲ್ಲ ಅರ್ಹತೆಗಳು ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈಗ ನೀವು ತಿಳಿದುಕೊಳ್ಳಬಹುದು.
ಇಂಟಲಿಜೆನ್ಸ್ ಬ್ಯುರೋದಲ್ಲಿ 226 ಹುದ್ದೆಗಳು :
ಕೇಂದ್ರ ಗೃಹ ಸಚಿವಾಲಯ ನೇಮಕಾತಿ ಪ್ರಾಧಿಕಾರ ವಾಗಿದ್ದು ಗುಪ್ತಚರ ಮಂಡಳಿ ನೇಮಕಾತಿ ಇಲಾಖೆಯಿಂದ ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಮತ್ತು ಟೆಕ್ ಎಕ್ಸಾಮ್ ಸೇರಿದಂತೆ ಒಟ್ಟು ಹುದ್ದೆಗಳು 226 ಇದ್ದು ಈ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. 79 ಕಂಪ್ಯೂಟರ್ ಸೈನ್ಸ್ ಹಾಗೂ 147 ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ :
ಕೇಂದ್ರ ಸರ್ಕಾರದ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಬಿಜಿ ಅಥವಾ ಬಿ ಟೆಕ್ ಅಥವಾ ಪಿಜಿ ಪದವಿಗಳನ್ನು ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕಾಗುತ್ತದೆ.
ವೇತನ ಶ್ರೇಣಿ :
ಇಂಟೆಲಿಜೆನ್ಸ್ ಬೀರೋದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಕನಿಷ್ಠ ವೇತನ 44900 ರಿಂದ 1 ಲಕ್ಷ 42,400 ವರೆಗೆ. ಇರುತ್ತದೆ.
ವಯಸ್ಸಿನ ಮಿತಿ :
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 27 ವರ್ಷ ವಯಸ್ಸನ್ನು ಮೀರಿರಬಾರದು ಹಾಗೂ ವಯಸ್ಸಿನಲ್ಲಿ ವರ್ಗಗಳಿಗೆ ಸಂಬಂಧಿಸಿದಂತೆ ವಯೋಮಿತಿಯಲ್ಲಿ ಮಾಡಲಾಗಿರುತ್ತದೆ.
ಇದನ್ನು ಓದಿ : ಕೋವಿಡ್ ರೂಪಾಂತರ ಪ್ರಕರಣ ಹಿನ್ನೆಲೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ
ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 200 ರೂಪಾಯಿಗಳನ್ನು ಜಿಎಂ ಒಬಿಸಿ ಅಭ್ಯರ್ಥಿಗಳಿಗೆ ಹಾಗೂ ನೂರು ರೂಪಾಯಿಯನ್ನು ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ. ಈ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :
ಇಂಟಲಿಜೆನ್ಸ್ ಬ್ಯುರೋದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆರಂಭಿಕ ದಿನಾಂಕ 23.12.2023 ಆಗಿರುತ್ತದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12.01.2024 ಆಗಿರುತ್ತದೆ.
ಹೀಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟಲಿಜೆನ್ಸ್ ವಿರೋಧದಲ್ಲಿ ಸುಮಾರು 256 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಮಾಹಿತಿಯ ಬಗ್ಗೆ ನಿಮಗೆ ತಿಳಿದಿರುವ ಪಿಜಿ ಹಾಗೂ ಯುಜಿ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಇದರಿಂದ ಅವರು ಈ ಹುದ್ದೆಗಳಿಗೆ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಸ್ವಂತ ಉದ್ಯೋಗ ಮಾಡುವವರಿಗೆ 10 ಲಕ್ಷ ಸಾಲ ಸೌಲಭ್ಯ ಕೂಡಲೇ ಅರ್ಜಿ ಸಲ್ಲಿಸಿ
- ಉಚಿತ ಪ್ರಯಾಣ ಮಾಡುವವರೇ ಗಮನಿಸಿ : ಈ ನಿಯಮ ಮುರಿದರೆ 500 ದಂಡ ಫಿಕ್ಸ್