News

ಡಿ.21ರಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಾರಂಭ : ಕಡ್ಡಾಯವಾಗಿ ಈ ದಾಖಲೆ ಬೇಕು

Registration for Youth Fund Scheme starts from December 21

ನಮಸ್ಕಾರ ಸ್ನೇಹಿತರೇ, ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಸುಮಾರು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಬಗ್ಗೆ ಮಾಹಿತಿಯನ್ನು ನೀಡಿತು ಅದರಂತೆ ಕೊಟ್ಟಿರುವ ಮಾತಿನಂತೆ ನಾಲ್ಕು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ರಾಜ್ಯದಲ್ಲಿ ನಡೆಯುತ್ತಿದ್ದು ಇದೀಗ ಯುವನಿಧಿ ಯೋಜನೆ ಯಾಗಿದ್ದು ಈ ಯೋಜನೆಗೆ ಈ ತಿಂಗಳೇ ಚಾಲನೆ ನೀಡಿರುವುದರ ಬಗ್ಗೆ ಮಾಹಿತಿ ನೀಡಲಾಗಿದೆ.

Registration for Youth Fund Scheme starts from December 21

ಡಿಸೆಂಬರ್ 21ರಿಂದ ನೊಂದಣಿ ಪ್ರಾರಂಭ :

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರವಣ ಪ್ರಕಾಶ್ ಪಾಟೀಲ್ ರವರು ಶನಿವಾರ ರಾಜ್ಯ ಸರ್ಕಾರದ 5ನೇ ಖಾತರಿ ಯೋಜನೆಯದ ಯುವನಿಧಿ ಯೋಜನೆಗೆ ಡಿಸೆಂಬರ್ 21 ರಿಂದ ನೋಂದಣಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಈ ಯೋಜನೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು ಎಂದು ಟಿ ಎನ್ ಐ ಇ ಜೊತೆಗೆ ಮಾತನಾಡುವಾಗ ಹೇಳಿದರು. ಶೀಘ್ರದಲ್ಲಿಯೇ ಇವನಿಗೆ ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಸಹ ನಿರ್ಧರಿಸಲಾಗುತ್ತದೆ ಈ ಯೋಜನೆಯ ಪ್ರಾರಂಭವಾದ ನಂತರ ಹಣಕಾಸಿನ ನೆರವನ್ನು ಪಡೆಯಲು ಫಲಾನುಭವಿಗಳು ಪ್ರಾರಂಭಿಸುತ್ತಾರೆ ಲಾಭವನ್ನು ಸುಮಾರು ಐದು ಲಕ್ಷ ಯುವಕರು ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಸಹ ತಿಳಿಸಿದರು.

ಇದನ್ನು ಓದಿ : SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಪ್ರತಿಯೊಬ್ಬ ವಿದ್ಯಾರ್ಥಿಗೆ 10,000 ಹಣ

ನಿರುದ್ಯೋಗ ಭತ್ಯೆ :

ಕಾಂಗ್ರೆಸ್ ಸರ್ಕಾರವು ಯುವನಿಧಿ ಯೋಜನೆಯ ಅಡಿಯಲ್ಲಿ 3000 ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಹಾಗೂ 1500 ಡಿಪ್ಲೋಮೋ ಪದವೀಧರರಿಗೆ ಪ್ರತಿ ತಿಂಗಳು ನೀಡಲಾಗುತ್ತಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು.

ಸರ್ಕಾರದ ಆರ್ಥಿಕ ನೆರವನ್ನು ಪಡೆಯಬೇಕಾದರೆ ಪದವಿ ಪಡೆದ ಆರು ತಿಂಗಳ ನಂತರ ಮತ್ತು ಆಗಲು ನಿರುದ್ಯೋಗಿಗಳಾಗಿ ಉಳಿದಿರುವವರಿಗೆ ಮಾತ್ರ ನೀಡಲಾಗುತ್ತದೆ. ಎರಡು ವರ್ಷಗಳವರೆಗೆ ಸರ್ಕಾರವು ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದ ಈ ಸಹಾಯಧನವನ್ನು ವರ್ಗಾಯಿಸಲಾಗುತ್ತದೆ.


ಹೀಗೆ ಕರ್ನಾಟಕದ ನಿರುದ್ಯೋಗ ಯುವಕ ಯುವತಿಯರಿಗೆ ರಾಜ್ಯ ಸರ್ಕಾರವು 5ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು,ಅವರು ತಮ್ಮ ಆರ್ಥಿಕ ಜೀವನವನ್ನು ಸದೃಢಪಡಿಸಿಕೊಳ್ಳಲು ಇದೊಂದು ರೀತಿಯಲ್ಲಿ ಸಹಾಯಕವಾಗುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಯೋಜನೆಗಾಗಿ ಕಾಯುತ್ತಿರುವ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರು ಜೊತೆಗೆ ಅವರ ಮಕ್ಕಳಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಯುವನಿಧಿ ಯೋಜನೆ ಡಿಸೆಂಬರ್ 21ರಲ್ಲಿ ನೋಂದಣಿ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...