ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ರೇಷನ್ ಕಾರ್ಡ್ ಅನ್ನು ರದ್ದುಪಡಿಸಿ ಅದರ ಜೊತೆಗೆ 13 ಲಕ್ಷ ದಂಡವನ್ನು ರಾಜ್ಯ ಸರ್ಕಾರವು ವಸೂಲಿ ಮಾಡಿರುವುದರ ಬಗ್ಗೆ. ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಫಲಾನುಭವಿಗಳು ಎಷ್ಟು ಉತ್ಸುಕರಾಗಿದ್ದಾರೆ ಅದೇ ರೀತಿ ತಮ್ಮ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಅವರ ರೇಷನ್ ಕಾರ್ಡ್ ಎಲ್ಲಿ ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿದ್ದಾರೆ ಇದಕ್ಕೆ ಮುಖ್ಯ ಕಾರಣ ರೇಷನ್ ಕಾರ್ಡನ್ನು ಅಕ್ರಮವಾಗಿ ಹೊಂದಿರುವುದಾಗಿದೆ. ಸದ್ಯ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಈಗಾಗಲೇ ಪರಿಶೀಲಿಸಿ, ಒಂದೊಂದೇ ಜಿಲ್ಲೆಗೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಬಿಡುಗಡೆ ಪ್ರಕ್ರಿಯೆ ಆರಂಭಿಸಿದ್ದು ಇದರ ಜೊತೆಗೆ ಅಕ್ರಮ ರೇಷನ್ ಕಾರ್ಡ್ ಗಳನ್ನು ಪ್ರತಿ ತಿಂಗಳು ಪ್ರತಿ ಜಿಲ್ಲೆಯಲ್ಲಿ ಪರಿಶೀಲಿಸಿ ಅಂತಹ ಕಾರ್ಡ್ಗಳ ರದ್ದುಪಡಿ ಮಾಡಲು ಮುಂದಾಗಿದೆ.

ರದ್ದಾಗಿರುವ ರೇಷನ್ ಕಾರ್ಡ್ :
ರೇಷನ್ ಹಾಗೂ ಸರ್ಕಾರದ ಯೋಜನೆಯ ಪ್ರಯೋಜನವನ್ನು ಇಲ್ಲಿಯವರೆಗೆ ಸುಲಭವಾಗಿ ಪಡೆದುಕೊಳ್ಳುತ್ತಿರುವವರು ಇನ್ನು ಮುಂದೆ ಈ ರೀತಿಯ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರವು ನಿಮ್ಮ ರೇಷನ್ ಕಾರ್ಡನ್ನು ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ರೇಷನ್ ಕಾರ್ಡ್ ಅನ್ನು ಅಕ್ರಮವಾಗಿ ಒಂದುವೇಳೆ ನೀವೇನಾದರೂ ಹೊಂದಿದ್ದರೆ ಅಥವಾ ಸರ್ಕಾರದ ಮಾನದಂಡದೊಳಗೆ ರೇಷನ್ ಕಾರ್ಡ್ ಇರದೇ ಇದ್ದರೆ ಅಂತ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ ರದ್ದುಪಡಿಸುತ್ತಿದೆ.
ದಂಡವನ್ನು ಪಾವತಿಸಬೇಕು :
ಸುಮಾರು ನಾಲ್ಕು ಲಕ್ಷ ಪಡಿತರ ಚೀಟಿಯನ್ನು 2022 ರಲ್ಲಿ ರದ್ದುಪಡಿಸಿರುವುದಲ್ಲದೆ 13 ಲಕ್ಷ ದಂಡವನ್ನು ಸಹ ಸರ್ಕಾರ ವಸೂಲಿ ಮಾಡಿದೆ. ಈಗಾಗಲೇ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಈ ವರ್ಷವೂ ಕೂಡ ರದ್ದುಪಡಿಸಲಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಬಿಪಿಎಲ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಆದರೆ ಉಳ್ಳವರು ಕೂಡ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿ ಉಚಿತ ಪಡಿತರ ಪಡೆಯುತ್ತಿದ್ದು ಇದನ್ನು ಗಮನಿಸಿ ರೇಷನ್ ಕಾರ್ಡ್ ಅನ್ನು ಸರ್ಕಾರ ಸ್ಥಗಿತಗೊಳಿಸುವುದು ಮಾತ್ರವಲ್ಲದೆ ದಂಡವನ್ನು ಕೂಡ ವಿಧಿಸಿದೆ.
ಇದನ್ನು ಓದಿ : ರೈತರ ಸಾಲ ಮನ್ನಾ ಆಗುತ್ತೆ: ಈ ದಾಖಲೆ ಸಿದ್ಧಪಡಿಸಿಕೊಳ್ಳಿ ಎಲ್ಲ ರೈತರು ಬೇಗ. !!!
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ವಿಧಾನ :
ಪ್ರತಿ ತಿಂಗಳು ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ಪರಿಶೀಲನೆ ನಡೆಸಿ ರದ್ದು ಪಡಿ ಮಾಡಲಾಗುತ್ತಿದ್ದು ರೇಷನ್ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡಿ ರೇಶನ್ ಕಾರ್ಡ್ ರದ್ದಾಗಿರುವುದರ ಬಗ್ಗೆ ಪ್ರತಿಯೊಬ್ಬರು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.
ಹೀಗೆ ರಾಜ್ಯ ಸರ್ಕಾರವು ಕೇವಲ ರೇಷನ್ ಕಾರ್ಡ್ ಅನ್ನು ರದ್ದುಪಡಿಸುವುದಲ್ಲದೆ ಅದರ ಜೊತೆಗೆ ದಂಡವನ್ನು ಕೂಡ ವಸೂಲಿ ಮಾಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಲ್ಲರಿಗೂ ಶೇರ್ ಮಾಡುವ ಮೂಲಕ ಕ್ರಮವಾಗಿ ಅವರೇನಾದರೂ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ ಎಂಬುದರ ಈ ವಿಷಯವನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಈ 4 ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಈ ವಾರ ತುಂಬ ಲಾಭ ಇದೆ , ಹೆಚ್ಚು ಈ ಕೆಲಸ ಮಾಡಿ
- ಗೃಹಲಕ್ಷ್ಮಿ ಯೋಜನೆ ರದ್ದು: ಸರ್ಕಾರದಿಂದ ಮಹತ್ವದ ನಿರ್ಧಾರ, ಕಾರಣ ಏನು?