ನಮಸ್ಕಾರ ಸ್ನೇಹಿತರೇ ಈಗಾಗಲೇ ನಮಗೆಲ್ಲರಿಗೂ ತಿಳಿದಿರುವಂತೆ ಯಾವ ಯಾವ ರೈತರು ಬೆಳೆ ಪರಿಹಾರಕ್ಕೆ 2020 22ನೇ ಸಾಲಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೋ ಅರ್ಜಿಗಳು ಇದೀಗ ರಾಜ್ಯ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದ್ದ ಆ ಅರ್ಜಿಗಳ ಖಾತೆಗಳಿಗೆ ಹಣವು ಜಮಾ ಆಗಿದ್ದು ಇದೀಗ 2023 ನೇ ಸಾಲಿನ ಬೆಳೆ ಪರಿಹಾರದ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
2023 ನೇ ಸಾಲಿನ ಬೆಳೆ ಪರಿಹಾರ :
ಮುಂಗಾರು ಬೆಳೆ ಪರಿಹಾರಕ್ಕೆ 2023ನೇ ಸಾಲಿನಲ್ಲಿ ರೈತರು ಅರ್ಜಿಯನ್ನು ಸಲ್ಲಿಸಿದ್ದು ಹಾಗೆಯೇ ಇದೀಗ ಮುಂಗಾರು ಬೆಳಿಗ್ಗೆ 2023ನೇ ಸಾಲಿನಲ್ಲಿ ರೈತರಿಗೆ ರಾಜ್ಯ ಸರ್ಕಾರವು ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿಯನ್ನು ಸಲ್ಲಿಸಲು ಇದೀಗ ಕೇವಲ 12 ದಿನಗಳು ಮಾತ್ರ ಕಾಲಾವಕಾಶ ಇದ್ದು ಯಾವ ರೈತರು ಇವುಗಳಿಗೆ ಅರ್ಜಿಯನ್ನು ಸಲ್ಲಿಸಿಲ್ಲವೂ ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಬಾರಿ ಅಂದರೆ 2023ನೇ ಸಾಲಿನಲ್ಲಿ ಕಾಲಕ್ಕೆ ಮುಂಗಾರು ಸಮಯದಲ್ಲಿ ಅನುಗುಣವಾಗಿ ಮಳೆಯಾಗಿರುವುದಿಲ್ಲ ಇದರಿಂದಾಗಿ ರಾಜ್ಯ ಸರ್ಕಾರವು ರಾಜ್ಯದ 109 ತಾಲೂಕುಗಳನ್ನು ಬರಗಾಲಪಡಿತ ತಾಲೂಕುಗಳೆಂದು ಘೋಷಣೆ ಮಾಡಿತು ಅದಕ್ಕಾಗಿ ಬೆಳ ಪರಿಹಾರ ಧನವನ್ನು ಅತಿ ಬೇಗನೆ ರೈತರ ಖಾತೆಗೆ ಈ ಬಾರಿ ತಲುಪಿಸಲಿದ್ದು ಇದರ ಬಗ್ಗೆ ನೋಡುವುದಾದರೆ,
ಬೆಳೆ ಪರಿಹಾರ ವಿತರಣೆ :
ಅವ್ಯವಹಾರ ತಡೆಯುವ ಮತ್ತು ಸರಿಯಾದ ನಾ ಪರಿಹಾರ ತಲುಪಿಸುವ ಉದ್ದೇಶದಿಂದ ಬೆಳೆ ಪರಿಹಾರ ವಿತರಣೆಯಲ್ಲಿ ರೈತರ ಘಟವನ್ನು ಶುದ್ಧೀಕರಿಸಲು ಮುಂದಿನ ಹದಿನೈದು ದಿನ ಅಭಿಯಾನವನ್ನು ಸರ್ಕಾರ ನಡೆಸಲಿದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದರು. ಕಾಮಗಾರಿ ಇಲಾಖೆಯ 4 ವಿಭಾಗದ ಪ್ರಗತಿ ಪರಿಶೀಲದ ಸಭೆಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ಅಂದು ಡಿಸೆಂಬರ್ ನಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂಬ ಸುದ್ದಿಯನ್ನು ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಈ ಸಭೆಯಲ್ಲಿ ತಿಳಿಸಲಾಗಿದೆ. ರಾಜ್ಯದ ಶೇಕಡ 95 ರಷ್ಟು ರೈತರ ಹೆಸರಲ್ಲಿ ಬರ ಪರಿಹಾರದ ಹಣ ನೀಡಲು ಐಡಿ ಸೃಷ್ಟಿಸಲಾಗಿದ್ದು ಆದರೆ ಅವುಗಳನ್ನು ಇನ್ನು ನಮೂದಿಸಲಾಗಿಲ್ಲ ಇದರಿಂದಾಗಿ ರೈತರಿಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ ಹೀಗಾಗಿ ಅಭಿಯಾನವನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಬರ ಪರಿಹಾರದ ಸ್ಟೇಟಸ್ ಅನ್ನು ಆನ್ಲೈನ ಮೂಲಕ ಚೆಕ್ ಮಾಡುವ ವಿಧಾನ :
ಬರ ಪರಿಹಾರದ ಸ್ಟೇಟಸ್ ಅನ್ನು ಆನ್ಲೈನ್ ಮೂಲಕ ಹೇಗೆ ಚೆಕ್ ಮಾಡಬೇಕು ಎಂಬುದನ್ನು ಇದೀಗ ನಿಮಗೆ ತಿಳಿಸಲಾಗುತ್ತಿದ್ದು, ಮೊದಲಿಗೆ ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಸರ್ಚ್ ಮಾಡಬೇಕು ಅದರಲ್ಲಿರುವ https://landrecords.karnataka.gov.in/PariharaPayment/ಈ ಡೈರೆಕ್ಟಲಿಂಕಿಗೆ ಎರಡು ಆಯ್ಕೆಗಳನ್ನು ನೋಡಬಹುದಾಗಿದ್ದು ಇದರಲ್ಲಿ ನಿಮ್ಮ ಬರ ಪರಿಹಾರದ ಐಡಿ ಇದ್ದರೆ ಪರಿಹಾರ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ನಂಬರ್ ಅನ್ನು ಹಾಕಲು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಹೀಗೆ ಇದರ ಬಗ್ಗೆ ಆನ್ ಲೈನ್ ಮೂಲಕ ತಿಳಿಯಬಹುದಾಗಿದೆ.
ಖಾತೆಗಳಿಗೆ ಬೆಳೆ ವಿಮೆ ಜಮಾ ಆಗಿದೆ ಎಂದು ನೋಡುವ ವಿಧಾನ :
ರೈತರು ತಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆ ಆಗಿದೆ ಎಂಬುದನ್ನು ಆನ್ಲೈನ್ ಮೂಲಕವೇ ನೋಡಬಹುದಾಗಿದ್ದು ಅದನ್ನು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡುವ ಮೂಲಕ ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. https://samrakshane.karnataka.gov.in/ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಇದರಲ್ಲಿ ಕೇಳುವಂತಹ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ನೀಡುವ ಮೂಲಕ ಇದರಲ್ಲಿ ಹಣ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು 2023 ನೇ ಸಾಲಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ರೈತರು ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಈ ಲೇಖನವನ್ನು ಪೂರ್ಣ ಓದಿ ಹೋದರ ಮೂಲಕ ತಿಳಿದುಕೊಳ್ಳಬಹುದಾಗಿತ್ತು ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರಿಗೆ ರಾಜ್ಯ ಸರ್ಕಾರದಿಂದ ಹಣ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕೃಷಿ ಹೊಂಡ ನಿರ್ಮಿಸಲು ರೈತರಿಗೆ 4 ಲಕ್ಷ ಸಹಾಯಧನ : ಈ ಅರ್ಜಿ ಭರ್ತಿ ಮಾಡಿ
ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ