ನಮಸ್ಕಾರ ಸ್ನೇಹಿತರೆ ನಮ್ಮ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು ಬಹುಮುಖ್ಯ ಯೋಜನೆಯಾಗಿದ್ದು ಇದರಲ್ಲಿ ಅನೇಕ ಮಹಿಳೆಯರಿಗೆ ಹಣ ಬಂದಿರುವುದಿಲ್ಲ ಹಾಗಾಗಿ ಆ ಮಹಿಳೆಯರಿಗೆ ಇದೀಗ ಸರ್ಕಾರ ಪರಿಹಾರವನ್ನು ಸೂಚಿಸಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.

ಸರ್ಕಾರವು ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಸಾಕಷ್ಟು ಮಹಿಳೆಯರು ಸರ್ಕಾರದ ಯೋಜನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಶೇಕಡ 80ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದೆ ಆದರೂ ಕೂಡ ಕೆಲವು ಮಹಿಳೆಯರಿಗೆ ಇನ್ನೂ ಖಾತೆಗೆ ಹಣ ಬಂದಿರುವುದಿಲ್ಲ ಮಹಿಳೆಯರು ಇನ್ನೂ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ರಾಜ್ಯ ಸರ್ಕಾರ ಇದಕ್ಕೆ ಪರಿಹಾರವನ್ನು ಕಂಡುಕೊಂಡಿದೆ.
ರಾಜ್ಯ ಸರ್ಕಾರದ ಮೆಗಾ ಪ್ಲಾನ್ :
ಹೌದು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಅದಾಲತ್ ಪ್ರಾರಂಭಿಸಿದೆ ಸರ್ಕಾರಕ್ಕೆ ಒಟ್ಟು ಅರ್ಜಿಗಳು ಸಲ್ಲಿಕೆಯಾಗಿರುವ ಮಾಹಿತಿ ನೋಡುವುದಾದರೆ 1.17 ಕೋಟಿ ಅರ್ಜಿಗಳು ಸಲ್ಲಿಕೆ ಆಗಿದ್ದವು ಅದರಲ್ಲಿ 1.10 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ.
ಉಳಿದವರ ಖಾತೆಗೆ ಯಾವಾಗ ಹಣ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ ಕಾರಣ ಗೃಹಲಕ್ಷ್ಮಿ ಹಣ ಬರಬೇಕು ಅಂದರೆ ಮಹಿಳೆಯರು ತಮ್ಮ ಖಾತೆಯನ್ನು ಆಕ್ಟಿವ್ ಮಾಡಿಕೊಳ್ಳಬೇಕು. ಅಂದರೆ ಬ್ಯಾಂಕ್ ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಇದನ್ನು ಓದಿ : ಗೃಹಲಕ್ಷ್ಮಿ ಹಣ ವಾಪಸ್ : ಈ ಕೆಲಸ ಮಾಡಿ ಇಲ್ಲ ಅಂದರೆ ಯಾವ ತಿಂಗಳೂ ಹಣ ಜಮಾ ಆಗಲ್ಲ
ಈ ಪ್ರಕ್ರಿಯೆ ಮುಗಿದ ನಂತರ ಮಹಿಳೆಯರಿಗೆ ಹಣ ವರ್ಗಾವಣೆ ಆಗಲಿದೆ ಹಾಗೂ ಇದರಲ್ಲೂ ಸಹ ನಿಮಗೆ ಸಮಸ್ಯೆ ಆದರೆ ನಿಮ್ಮ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಬಂದು ನಿಮ್ಮನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಕೊಡುತ್ತಾರೆ.
ಡಿಸೆಂಬರ್ ತಿಂಗಳಲ್ಲಿ ನಿಮ್ಮ ಖಾತೆಗೆ ಹಣ :
ಹೌದು ಡಿಸೆಂಬರ್ ತಿಂಗಳ ಒಳಗಾಗಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಂಡಿದೆ ಇಷ್ಟಾಗಿಯೂ ನಿಮ್ಮ ಖಾತೆಗೆ ಹಣ ಬಂದಿಲ್ಲದಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಬಹುದು .ಆಗ ಸಂಬಂಧ ಪಟ್ಟ ಅಧಿಕಾರಿಗಳು ನಿಮ್ಮ ಖಾತೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ನಿಮಗೆ ಹಣ ಸಂದಾಯವನ್ನು ಮಾಡಲಿದ್ದಾರೆ.
ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಸಹ ಸಹಾಯಕವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ರೈಲ್ವೆ ಇಲಾಖೆಯಿಂದ “ಒಂದು ಮಾರ್ಗ ಒಂದು ಊಟ” ಯೋಜನೆ ಜಾರಿ ಉದ್ದೇಶ ತಿಳಿದುಕೊಳ್ಳಿ
- ಸರ್ಕಾರದ ಖಡಕ್ ವಾರ್ನಿಂಗ್ : ಕೆಲವರ ಮೊಬೈಲ್ ನಂಬರ್ ರದ್ದು