News

ನೌಕರರಿಗೆ ದೊಡ್ಡ ಘೋಷಣೆ : ಹಳೆ ಪಿಂಚಣಿ ಯೋಜನೆ ಮರುಜಾರಿ ಹಾಗು ವೇತನ ಹೆಚ್ಚಳ

Revival of old pension scheme

ನಮಸ್ಕಾರ ಸ್ನೇಹಿತರೇ ಹಳೆಯ ಪಿಂಚಣಿ ಯೋಜನೆಯನ್ನು ಅಂದರೆ ಒಪಿಎಸ್ ಅನ್ನು ಮಹಾರಾಷ್ಟ್ರದ ಏಕನಾಥ್ ಸಿಂಧೆ ಅವರ ಸರ್ಕಾರವು ಅನುಮೋದಿಸಿದೆ. ಇ ಆಯ್ಕೆಯನ್ನು 2005ರ ನಂತರ ಉದ್ಯೋಗದಲ್ಲಿರುವ ರಾಜ್ಯ ಉದ್ಯೋಗಿಗಳು ಹಾರಿಸಿಕೊಳ್ಳಬಹುದಾಗಿತ್ತು ಹಳೆ ಪಿಂಚಣಿ ಯೋಜನೆಯನ್ನು ಕೆಲವು ದಿನಗಳ ಹಿಂದೆ ಮರು ಸ್ಥಾಪಿಸುವಂತೆ ಒತ್ತಾಯಿಸಿ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಮುಷ್ಕರ ನಡೆಸಿದ್ದರು ಆದರೆ ಇದೀಗ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ವಾಸ್ತವವಾಗಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಈ ವರ್ಷ ನಡೆಯಬೇಕಿದೆ. ಇನ್ನು ಕೆಲವೇ ದಿನಗಳು ಲೋಕಸಭಾ ಚುನಾವಣೆಗೆ ಬಾಕಿ ಇದ್ದು ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಸಮಾಧಾನದಿಂದ ದೂರ ಉಳಿಯಲು ರಾಜ್ಯ ಸರ್ಕಾರ ಬಯಸಿದೆ.

Revival of old pension scheme
Revival of old pension scheme

ಓಪಿಎಸ್ ಯೋಜನೆ ಜಾರಿ :

ಮಹಾರಾಷ್ಟ್ರ ರಾಜ ನೌಕರರ ಒಕ್ಕೂಟ ದ ಪ್ರಧಾನ ಕಾರ್ಯದರ್ಶಿ ವಿಶ್ವ ಕಾಟ್ಕರ್ ರವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದು ಸರ್ಕಾರದ ಈ ನಿರ್ಧಾರವು 2005ರ ನಂತರ ಉದ್ಯೋಗ ಪಡೆದ ರಾಜ್ಯದ ಸುಮಾರು 26 ಸಾವಿರ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದು ನವೆಂಬರ್ 2005ರ ಮೊದಲು ಸರಿ ಸುಮಾರು 9.5 ಲಕ್ಷ ರಾಜ್ಯ ನೌಕರರು ಸೇವೆಗೆ ಸೇರಿದ್ದಾರೆ ಮತ್ತು ಈಗಾಗಲೇ ಅವರು ಓಪಿಎಸ್ ನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಹೊಸ ಯೋಜನೆ : ಉಚಿತ ಹೊಲಿಗೆ ಯಂತ್ರ ಪ್ರತಿಯೊಬ್ಬರಿಗೂ ಸಿಗುತ್ತೆ -2024

ಒಬ್ಬ ಸರ್ಕಾರಿ ನೌಕರರನ್ನು ತನ್ನ ಕೊನೆಯ ವೇತನದ 50 ಪ್ರತಿಶತಕ್ಕೆ ಸಮನಾದ ಮಾಸಿಕ ಪಿಂಚಣಿಯನ್ನು ಓಪಿಎಸ್ ಅಡಿಯಲ್ಲಿ ಪಡೆಯುತ್ತಾರೆ. ಆರು ತಿಂಗಳ ಒಳಗಾಗಿ ಅಂತಹ 26 ಸಾವಿರ ನೌಕರರು ಹಳೆ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಗೆ ಆಯ್ಕೆ ಮಾಡಿಕೊಳ್ಳುವಂತೆ ಸಚಿವ ಸಂಪುಟ ತಿಳಿಸಿದ್ದು ಇದಕ್ಕಾಗಿ ಇಲಾಖೆಯಲ್ಲಿ ಇನ್ನೆರಡು ತಿಂಗಳಲ್ಲಿ ಸಂಬಂಧಪಟ್ಟಂತೆ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

ಹೀಗೆ ಮಹಾರಾಷ್ಟ್ರ ಸರ್ಕಾರವು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು ಒಂದು ಬಾರಿ ಆಯ್ಕೆಯನ್ನು ಉದ್ಯೋಗಿಗಳಿಗೆ ಇದು ನೀಡಲಾಗಿದ್ದು ಅಂದರೆ ಈ ಆಯ್ಕೆಯನ್ನು ಮಾಡಿದ ನಂತರ ಉದ್ಯೋಗಿಗಳು ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಹೀಗೆ ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...