ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಭಾರತೀಯ ಜೀವ ವಿಮಾ ನಿಗಮ ದೇಶದಾದ್ಯಂತ ನಂಬಿಕಸ್ತ ಹೂಡಿಕೆ ಪ್ಲಾಟ್ಫಾರಮ್ ಆಗಿತ್ತು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಬರಲಿಯು ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಘೋಷಣೆಯನ್ನು ಈ ಬಾರಿ ಮಾಡಲಾಗಿದ್ದು ದ್ವಿತೀಯ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳು 40,000ಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಲು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಐಸಿ ಗೋಲ್ಡನ್ ಜುಬ್ಲಿ ವಿದ್ಯಾರ್ಥಿ ವೇತನ :
ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಎಲ್ಐಸಿ ಕಂಪನಿಯು ವಿದ್ಯಾರ್ಥಿವೇತನ ನೀಡಿದರೆ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಭಾರತೀಯ ಜೀವ ವಿಮಾ ನಿಗಮ ದ್ವಿತೀಯ ಪಿಯುಸಿ ಮುಗಿಸಿರುವವರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :
ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮೋ ಕೋರ್ಸ್ ಅನ್ನು 20223ರ ಶೈಕ್ಷಣಿಕ ವರ್ಷದಲ್ಲಿ ದೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು 60% ರಷ್ಟು ಅಂಕಗಳನ್ನು ಗಳಿಸಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯವು ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು. ಎಲ್ಐಸಿ ಈ ವಿಶೇಷ ವಿದ್ಯಾರ್ಥಿ ವೇತನವನ್ನು ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ನೀಡುತ್ತಿದ್ದು 10ನೇ ತರಗತಿ ನಂತರ ದ್ವಿತೀಯ ಪಿಯುಸಿ ಹಾಗೂ ಪೂರಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ವೇತನದ ಮೊತ್ತ :
40,000 ವಿದ್ಯಾರ್ಥಿ ವೇತನವನ್ನು ವರ್ಷಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮೂರು ಹಂತಗಳಲ್ಲಿ ಈ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗುತ್ತದೆ.
ಇದನ್ನು ಓದಿ : ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಿಗುತ್ತೆ
ಅರ್ಜಿ ಸಲ್ಲಿಸುವ ವಿಧಾನ :
ಎಲ್ಐಸಿಯ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಆನ್ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿಯನ್ನು ಸಲ್ಲಿಸಲು ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://gjss.licindia.in/GJSS/ಈ ವೆಬ್ ಸೈಟ್ ಗೆ ಭೇಟಿ ನೀಡಿ ಜನವರಿ 14 2024ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ದಾಖಲೆಗಳು :
ಎಲ್ಐಸಿ ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು 2012 23ನೇ ಸಾಲಿನ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಹೀಗೆ ಭಾರತೀಯ ಯುವ ವಿಮಾ ಕಂಪನಿಯು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಸುಮಾರು 40 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಇಂದಿನಿಂದ ಜನವರಿ14 ತನಕ ಶಾಲಾ ಮಕ್ಕಳಿಗೆ ರಜೆ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ
- ಕಾರ್ಮಿಕರ ಲೇಬರ್ ಕಾರ್ಡ್ ಗ್ಯಾರಂಟಿ ಬ್ಯಾನ್ ಆಗಲಿದೆ : ಈ ತಪ್ಪು ಎಂದಿಗೂ ಮಾಡಬೇಡಿ