ನಮಸ್ಕಾರ ಸ್ನೇಹಿತರೇ, ತಿಳಿಸುತ್ತಿರುವ ವಿಷಯವೆಂದರೆ ಕೋಲ್ಗೇಟ್ ಇಂಡಿಯಾದ ಸಿ ಎಸ್ ಆರ್ ಕಾರ್ಯಕ್ರಮವನ್ನು ಬೆಂಬಲಿಸಲು ಹಲವಾರು ಕಾರ್ಯಕ್ರಮಗಳನ್ನು ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಫೌಂಡೇಶನ್ ಅಡಿಯಲ್ಲಿ ನಡೆಸಲಾಗುತ್ತಿದೆ. ಕೋಲ್ಗೆಟ್ ಇಂಡಿಯಾ ತನ್ನ ಚೊಚ್ಚಲ ಪ್ರವೇಶವನ್ನು 1937ರಲ್ಲಿ ಮಾಡಿತು. ಈ ಕಂಪನಿಯು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷವೂ ನೀಡುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಯನ್ನು ಇದೀಗ ನೋಡಬಹುದು ,

Colate ಕಂಪನಿಯಿಂದ ವಿದ್ಯಾರ್ಥಿ ವೇತನ :
ಕೋಲ್ಗೇಟ್ ಕಂಪನಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನವನ್ನು ಕೋಲ್ಗೇಟ್ ಪಲ್ಮಾ ಲೈಫ್ ಲಿಮಿಟೆಡ್ ಪ್ರಕಾರ ಬಿಡಿಎಸ್ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳು ಪಡೆಯಬಹುದಾಗಿದೆ. 75,000 ವರೆಗೆ ಈ ಸಹಾಯಧನವನ್ನು ವಿದ್ಯಾರ್ಥಿಗಳು ಪಡೆಯಬಹುದು.
ಅರ್ಹತೆಗಳು :
ಕೋಲ್ಗೇಟ್ ಕಂಪನಿಯು ನೀಡುತ್ತಿರುವ ಈ ಸ್ಕಾಲರ್ಶಿಪ್ ಅನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಭಾರತದಲ್ಲಿ ಶಾಶ್ವತವಾಗಿ ವಾಸಿಸುತ್ತಿರಬೇಕು. ಈ ವಿದ್ಯಾರ್ಥಿ ವೇತನಕ್ಕೆ ಪ್ರಸ್ತುತ ಬ್ಯಾಚ್ ಗಳ ಡೆಂಟಲ್ ಸರ್ಜರಿ ಕೋರ್ಸ್ ನಲ್ಲಿ ನೋಂದಾಯಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ ಶೇಕಡ 60ರಷ್ಟು ಅಂಕಗಳೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪದವಿ ಪೂರ್ವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ದಾಖಲಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಇದನ್ನು ಓದಿ : ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಿಗುತ್ತೆ
ದಾಖಲೆಗಳು :
ಕೆಲವೊಂದು ಅಗತ್ಯ ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಅವುಗಳಿಂದಲೇ ಪಾಸ್ಪೋರ್ಟ್ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮಾರ್ಕ್ಸ್ ಕಾರ್ಡ್ ಗ್ರೇಡ್ ಕಾರ್ಡ್ ಪ್ರದೇಶದ ಪುರಾವೆ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಕೋಲ್ಗೇಟ್ ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. https://www.buddy4study.com/page/colgate-keep-india-smiling-scholarship-program ಈ ವೆಬ್ ಸೈಟ್ ಗೆ ಭೇಟಿ ನೀಡಿ ಜನವರಿ 31 2024ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ಕೋಲ್ಗೇಟ್ ಕಂಪನಿಯು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ಉನ್ನತ ವಿದ್ಯಾಭ್ಯಾಸಕ್ಕೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಅವರು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇದರಿಂದ ಅವರು colgate ಕಂಪನಿಯು ನೀಡುತ್ತಿರುವ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಇಂದಿನಿಂದ ಜನವರಿ14 ತನಕ ಶಾಲಾ ಮಕ್ಕಳಿಗೆ ರಜೆ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ
- ಕಾರ್ಮಿಕರ ಲೇಬರ್ ಕಾರ್ಡ್ ಗ್ಯಾರಂಟಿ ಬ್ಯಾನ್ ಆಗಲಿದೆ : ಈ ತಪ್ಪು ಎಂದಿಗೂ ಮಾಡಬೇಡಿ