ನಮಸ್ಕಾರ ಸ್ನೇಹಿತರೆ ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೇ ಎಂಬ ಗೌರವಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಟು ಪಾತ್ರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ಪ್ರತಿಷ್ಠಿತ ವಾಸ್ತು ಶಿಲ್ಪ ಸ್ಪರ್ಧೆಯ ಪ್ರಿಕ್ಸ್ ವೈರ್ಸ್ ಗೌರವಕ್ಕೆ ಪಾತ್ರವಾಗಿದೆ.
ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಸುಂದರ ನಿಲ್ದಾಣವಾಗಿದೆ :
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದಾದ್ಯಂತ ಸುಂದರ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಈ ವರ್ಷದ ಗೌರವ ಟರ್ಮಿನಲ್ ಟು ನಲ್ಲಿರುವ ಒಳಾಂಗಣ ವಿನ್ಯಾಸಕ್ಕೆ ಸಿಕ್ಕಿರುವುದಲ್ಲದೆ, ಈ ವಿಮಾನ ನಿಲ್ದಾಣವು ಈ ಗೌರವಕ್ಕೆ ಪಾತ್ರವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯು ಈಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೊರಕಿದೆ.
ಪ್ಯಾರಿಸ್ ಮೂಲದ ಪ್ರಿಕ್ಸ್ ವೆರ್ಸೈಲ್ಸ್ :
2015 ರಲ್ಲಿ ಪ್ಯಾರಿಸ್ ಮೂಲದ ಪ್ರಿಕ್ಸ್ ವೆರ್ಸೈಲ್ಸ್ ಸ್ಥಾಪನೆ ಮಾಡಲಾಗಿದ್ದು, ಕ್ಯಾಂಪಸ್ಗಳು ವಿಮಾನ ನಿಲ್ದಾಣಗಳು ಶಾಪಿಂಗ್ ಮಾಲ್ಗಳು ಮತ್ತು ಪ್ರಯಾಣಿಕರ ನಿಲ್ದಾಣಗಳು ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಇದು ನೀಡುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ಟರ್ಮಿನಲ್ ಟು ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ದೇಶಿಯ ಕಾರ್ಯಾಚರಣೆಯು ಈ ವರ್ಷದ ಜನವರಿ 15 ರಿಂದ ಆರಂಭಗೊಂಡಿತ್ತು. ಎಲ್ಲಾ ಅಂತರಾಷ್ಟ್ರೀಯ ವಿಮಾನಗಳ ಜೊತೆ ದೇಶಿಯ ಸೇವೆ ನೀಡುವ ಏಷ್ಯಾ ಏರ್ ಇಂಡಿಯಾ ಸ್ಟಾರ್ ಏರ್ ವಿಸ್ತಾರ ಕಂಪನಿಗಳ ವಿಮಾನ ಕಾರ್ಯ ಚರಣೆ ಟರ್ಮಿನಲ್ ಟು ನಿಂದ ಸೆಪ್ಟೆಂಬರ್ 12ರಿಂದ ನಡೆಯುತ್ತಿದೆ.
ಇದನ್ನು ಓದಿ : ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಇನ್ನುಮುಂದೆ ಬೇರೆ ರೀತಿಯಲ್ಲಿ ಮಾಡಲು ಪ್ಲಾನ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಟು :
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಟು ಒಳಾಂಗಣ ಸಂಪೂರ್ಣ ಟರ್ಮಿನಲ್ ಟು ಹೊಸದಾಗಿ ಎರಡನೇ ರೈಲ್ವೆ ಮಲ್ಟಿ ಮೋಡಲ್ ಸಾರಿಗೆ ಕೇಂದ್ರ ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಹೀಗೆ ಪ್ರಯಾಣಿಕರಿಗೆ ಇದರಲ್ಲಿ ಮೂಲಸೌಕರ್ಯಗಳು ಲಭ್ಯವಾಗುತ್ತದೆ. 500 ರಿಂದ 6 ಕೋಟಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದ ತರ್ಮಿನಲ್ ಟು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು 100% ರಷ್ಟು ಸುರಕ್ಷತೆಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ಸನ್ನು ನವೀಕರಿಸಬಹುದಾದ ಶಕ್ತಿಯನ್ನು ರಚಿಸಲಾಗಿದೆ.
ಗಾರ್ಡನ್ ಟರ್ಮಿನಲ್ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಟು ಅನ್ನು ಕರೆಯಲಾಗುತ್ತದೆ. ಏಕೆಂದರೆ ಈ ವಿಮಾನ ನಿಲ್ದಾಣವು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದ್ದು ಭಾರತದ ಗಾರ್ಡನ್ ಸಿಟಿ ಎಂದು ಬೆಂಗಳೂರನ್ನು ಕರೆಯಲಾಗುತ್ತದೆ. ಅಲ್ಲದೆ ಈ ವ್ಯಾಖ್ಯೆಯನ್ನು ಇದು ಎತ್ತಿ ಹಿಡಿಯುತ್ತದೆ.
ಹೀಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಟು ವಿಶ್ವದ ಸುಂದರ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತಿದೆ. ಇದೊಂದು ರೀತಿಯಲ್ಲಿ ನಮ್ಮ ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆಯಾಗಿದೆ. ಹಾಗಾಗಿ ಮಾಹಿತಿಯನ್ನು ಕರ್ನಾಟಕದಲ್ಲಿರುವ ನಿಮ್ಮ ಸ್ನೇಹಿತರಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮೊಮ್ಮಗನಿಗೆ ತಾತನ ಆಸ್ತಿಯ ಮೇಲೆ ಹಕ್ಕು ಇದೆಯಾ ? ಆಸ್ತಿಯ ಬಗ್ಗೆ ಕಾನೂನಿನ ನಿಯಮವೇನು ?
- ಬ್ಯಾಂಕುಗಳಿಗೆ ಸತತ 5 ದಿನ ರಜೆ : ಯಾವ ದಿನದಂದು ಎಂದು ತಿಳಿದುಕೊಳ್ಳಿ