ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು ಬೆಳೆ ಸಾಲ ಮನ್ನಾ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ತಮ್ಮ ಬಳಿ ಇರುವ ಮೊಬೈಲ್ ನಲ್ಲಿಯೇ ರೈತರು ಚೆಕ್ ಮಾಡಬಹುದಾಗಿದೆ. ಯಾರ ಸಹಾಯವೂ ಇಲ್ಲದೆ ರೈತರು ಬ್ಯಾಂಕಿಗೂ ಹೋಗದೆ ಇದೀಗ ಪರಿಹಾರದ ಹಣ ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿದೆ.

ರೈತರ ಸಾಲ ಮನ್ನಾ :
2018ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಒಂದು ಲಕ್ಷದವರೆಗೆ ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದರು ಆದರೆ ಬಹಳಷ್ಟು ರೈತರಿಗೆ ಈ ಸಾಲ ಮನ್ನಾ ಯೋಜನೆಯಿಂದ ಸಾಲಮನ್ನಾ ಭಾಗ್ಯಾ ಸಿಕ್ಕಿರುವುದಿಲ್ಲ ಕೆಲವು ರೈತರ ಸಾಲ ಮನ್ನಾ ಸರ್ಕಾರ ವಿಧಿಸಿದ ಷರತ್ತುಗಳಿಂದಾಗಿ ಆಗಿರುವುದಿಲ್ಲ ನಂತರ ಶರತ್ತುಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದರ ಪರಿಣಾಮವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ರೈತರು ಸಾಲಮನ್ನಾ ಪಡೆದಿದ್ದರು.
ಎರಡೆರಡು ಸಹಕಾರ ಬ್ಯಾಂಕುಗಳಿಂದ ಕೆಲವು ರೈತರು ಸಾಲ ಪಡೆದಿದ್ದರಿಂದ ಅವರ ಹೆಸರನ್ನು ಸಾಲಮನ್ನಾ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು ಬೇರೆ ಬೇರೆ ಬ್ಯಾಂಕುಗಳಲ್ಲಿಯೂ ಒಂದು ಆಧಾರ್ ಸಂಖ್ಯೆಯಿಂದ ಕೆಲವು ರೈತರು ಸಾಲ ಪಡೆದಿದ್ದಾರೆ ಎಂದು ಹಾಗೂ ಸಾಲಮನ್ನವನ್ನು ಜುಲೈ 10 2018 ರ ಒಳಗಾಗಿ ಮಾಡುವುದಾಗಿ ಸರ್ಕಾರ ಘೋಷಿಸಿದ್ದರಿಂದ ಒಂದೆರಡು ದಿನಗಳ ಹಿಂದೆ ಆ ದಿನಕ್ಕೆ ಏಕವ್ಯಕ್ತಿಯ ಪಡಿತರ ಚೀಟಿಗಳನ್ನು ಪಡೆದವರ ಹೆಸರನ್ನು ಸಹ ಸಾಲಮನ್ನಾ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಅಂಶವು ತಿಳಿದುಬಂದಿದ್ದು ಹೀಗಾಗಿ ಸಾಲಮನ್ನಾ ಪಟ್ಟಿಯಿಂದ ಕೆಲವು ರೈತರನ್ನು ಅನರ್ಹಗೊಳಿಸಲಾಗಿತ್ತು.
ಇದನ್ನು ಓದಿ : ರಾಜ್ಯದ ಜನತೆಗೆ 6 ಗ್ಯಾರಂಟಿ ಯೋಜನೆ : ತಪ್ಪದೆ ತಿಳಿದುಕೊಂಡಿ ಅರ್ಜಿ ಸಲ್ಲಿಸಿ
ಸಾಲ ಮನ್ನಾ ಪಟ್ಟಿಯಲ್ಲಿ ಹೆಸರು ಇರುವುದನ್ನು ಚೆಕ್ ಮಾಡುವ ವಿಧಾನ :
ನಿಮ್ಮ ಹೆಸರೇನಾದರೂ ಸಾಲಮನ್ನಾ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಬೇಕಾದರೆ ರೈತರು ಸರ್ಕಾರದ https://clws.karnataka.gov.in/clws/bank/fsd_report/BANK_IFR.aspx/ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದ ನಂತರ ಬೆಳೆ ಸಾಲ ಮನ್ನಾ ಯೋಜನೆಯ ಒಂದು ಪೇಜ್ ರೈತರಿಗೆ ತೆರೆದುಕೊಳ್ಳುತ್ತದೆ. ಕೆಲವು ಆಯ್ಕೆಗಳನ್ನು ಇಲ್ಲಿ ರೈತರು ಮಾಡಿಕೊಳ್ಳಬೇಕಾಗುತ್ತದೆ ಅಂದರೆ ಯಾವ ಜಿಲ್ಲೆ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಎಂಬುದನ್ನು ಆಯ್ಕೆ ಮಾಡಿದ ನಂತರ ಹೆಚ್ಚು ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಷ್ಟು ಜನ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದು ಸಾಲ ಮನ್ನಾ ಪಟ್ಟಿಯಲ್ಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ರೈತರಿಗೆ ಸಿಗುತ್ತದೆ.
ಸಾಲ ಮನ್ನಾ ಪಟ್ಟಿಯಲ್ಲಿ ಇರುವ ಮಾಹಿತಿಗಳು :
ಸರ್ಕಾರವು ಸಾಲ ಮನ್ನಾ ಪಟ್ಟಿಯಲ್ಲಿ ಕೆಲವೊಂದು ಮಾಹಿತಿಗಳನ್ನು ನೀಡಿರುತ್ತದೆ ಅವುಗಳೆಂದರೆ ರೈತರ ಹೆಸರು ಸಾಲದ ಬ್ಯಾಂಕ್ ಅಕೌಂಟ್ ಸಾಲದ ಕಸ್ಟಮರ್ ಐಡಿ ಯಾವ ದಿನಾಂಕದಂದು ಸಾಲ ಪಡೆದಿದ್ದಾರೆ ಯಾವ ಪ್ರಕಾರದ ಸಾಲ ಎಷ್ಟು ಸಾಲವನ್ನು ಪಡೆದಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯು ಇರುತ್ತದೆ. ಹೀಗೆ ಕೆಲವೊಂದು ಮಾಹಿತಿಗಳು ಸಾಲಮನ್ನಾ ಪಟ್ಟಿಯಲ್ಲಿ ಇರುತ್ತದೆ.
ಒಟ್ಟಾರೆ ರಾಜ್ಯ ಸರ್ಕಾರ ರೈತರಿಗೆ ಸುಲಭವಾಗಿ ಎನ್ನುವ ಉದ್ದೇಶದಿಂದ ಮೊಬೈಲ್ ನಲ್ಲಿಯೇ ಸಾಲ ಮನ್ನಾ ಸುಲಭವಾಗಿ ಎನ್ನುವ ಉದ್ದೇಶದಿಂದ ಮೊಬೈಲ್ ನಲ್ಲಿಯೇ ಸಾಲ ಮನ್ನಾ ಪಟ್ಟಿಯ ಲಿಸ್ಟ್ ಅನ್ನು ಚೆಕ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸುಲಭವಾಗಿ ರೈತರು ಯಾವುದೇ ಕಚೇರಿ ಹಾಗೂ ಬ್ಯಾಂಕಿಗೆ ಭೇಟಿ ನೀಡದೆ ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೀರೋ ಸ್ಪ್ಲೆಂಡರ್ ಈಗ ಎಲೆಕ್ಟ್ರಿಕ್ ಬೈಕ್ ರಿಲೀಸ್ ಆಗಲಿದೆ. ಕಡಿಮೆ ಬೆಲೆ ನೋಡಿ
- ಮೂರು ದೊಡ್ಡ ಉಡುಗೊರೆಗಳು ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ, ಹಣ ಹೆಚ್ಚಳ ಆಗಿದೆ ನೋಡಿ