ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರ್ಕಾರವು ಒಂದಲ್ಲ ಒಂದು ಕಲ್ಯಾಣ ಯೋಜನೆಗಳನ್ನು ಕಾರ್ಮಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಪ್ರಾರಂಭಿಸುತ್ತಿದೆ. ಇದೇ ದಾರಿಯಲ್ಲಿ ಇದೀಗ ಶ್ರಮಿಕ ಸುಲಭಾವಾಸ್ಯ ಯೋಜನೆಯನ್ನು ರಾಜ್ಯ ಸರ್ಕಾರವು ಆರಂಭಿಸಲು ನಿರ್ಧರಿಸಿದ್ದು ಈ ಯೋಜನೆಯ ಪ್ರಯೋಜನವನ್ನು ಬಡತನ ರೇಖೆಗಿಂತ ಕೆಳಗಿರುವ ಹಾಗೂ ದಿನಗೂಲಿ ಕಾರ್ಮಿಕರು ಪಡೆಯಬಹುದಾಗಿದೆ.
ಶ್ರಮಿಕ ಸುಲಭ್ ಆವಾಸ್ ಯೋಜನೆ :
ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಕ ಸುಲಬ್ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರವು ಪ್ರಾರಂಭಿಸಿದ್ದು ಈ ಯೋಜನೆಯಡಿಯಲ್ಲಿ 1.5 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ನೀಡಲಾಗುತ್ತದೆ. ಸರ್ಕಾರವು ಕಾರ್ಮಿಕರ ಕನಸು ನನಸಾಗಿಸಿಕೊಳ್ಳುವ ಉದ್ದೇಶದಿಂದ ಶಾಶ್ವತ ಮನೆ ನಿರ್ಮಿಸಿಕೊಳ್ಳಲು ಸಹಾಯಧನವನ್ನು ನೀಡುತ್ತಿದೆ. 2016ರಲ್ಲಿ ಶ್ರಮಿಕ ಸುಲಭ ಆವಾಸ್ ಯೋಜನೆಯನ್ನು ಪ್ರಾರಂಭಿಸಿದ್ದು ಶಾಶ್ವತ ಮನೆಯನ್ನು ಹೊಂದಿರದ ಪ್ರತಿಯೊಬ್ಬ ಕೂಲಿಕಾರರು ಈ ಯೋಜನೆಯ ಮೂಲಕ ಸಹಾಯಧನವನ್ನು ಪಡೆದು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆ.
ಶ್ರಮಿಕ್ ಸುಲಭ್ ಆವಾಸ್ ಯೋಜನೆಗೆ ಇರುವ ಅರ್ಹತೆಗಳು :
ಒಂದು ವರ್ಷ ಮುಂಚಿತವಾಗಿ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಸ್ವಂತ ಭೂಮಿಯನ್ನು ಕೆಲಸಗಾರರು ಮನೆ ನಿರ್ಮಿಸಿಕೊಳ್ಳಲು ಹೊಂದಿರಬೇಕು. ವರ್ಷಕ್ಕೆ 70000 ಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರಬಾರದು. ಜನ್ ಆಧಾರ್ ಕಾರ್ಡ್ ಅಡಿಯಲ್ಲಿ ಉದ್ಯೋಗಿಯ ಹೆಸರಿರಬೇಕು.
ಅಗತ್ಯವಿರುವ ದಾಖಲೆಗಳು :
ಶ್ರಮಿಕ್ ಸುಲಬ್ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಥವಾ ಓಬಿಸಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಆದಾಯ ಪ್ರಮಾಣ ಪತ್ರ ವಸತಿ ಪ್ರಮಾಣ ಪತ್ರ ಕಾರ್ಮಿಕರ ನೋಂದಣಿ ಸಂಖ್ಯೆಯನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕು.
ಇದನ್ನು ಓದಿ : ಕೋರ್ಟ್ ನಿಂದ ಆಸ್ತಿಯ ಬಗ್ಗೆ ಮಹತ್ವದ ತೀರ್ಪು : ತಾತನ ಆಸ್ತಿಯಲ್ಲಿ ಒಬ್ಬರಿಗೆ ಮಾತ್ರ ಹಕ್ಕು
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಈ ಮಿತ್ರ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು ಅರ್ಜಿಯನ್ನು ಆಫ್ಲೈನ್ ಹಾಗೂ ಆನ್ಲೈನ್ ಮೂಲಕವೂ ಸಹ ಸಲ್ಲಿಸಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಕಾರ್ಮಿಕರು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಕಾರ್ಮಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಎಲ್ಲ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುತ್ತದೆ : ಸರ್ಕಾರದಿಂದ ಮಹತ್ವದ ಘೋಷಣೆ
- ಜನವರಿ ತಿಂಗಳಿನಲ್ಲಿ ಈ ಜನರಿಗೆ ಮಾತ್ರ ಅಕ್ಕಿ ಮತ್ತು ಹಣ, ಹೊಸ ಲಿಸ್ಟ್ ಬಿಡುಗಡೆ