ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈತರಿಗೆ ಮಹತ್ತರವಾದ ವಿಷಯವನ್ನು ತಿಳಿಸಲಾಗುತ್ತಿತ್ತು ಅತ್ಯಂತ ಕಡಿಮೆ ದರದಲ್ಲಿ ಸರ್ಕಾರವು ರೈತರಿಗೆ ಸ್ಪ್ರಿಂಕ್ಲರ್ ಪೈಪ್ ಸೆಟ್ ನೀಡುತ್ತಿದೆ. ಅದರಂತೆ ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಇದರಿಂದ ಏನು ಉಪಯೋಗವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ರೈತರಿಗಾಗಿ ಸ್ಪ್ರಿಂಕ್ಲರ್ ಪೈಪ್ ಸೆಟ್ :
ಸುಮಾರು 1800 ರಲ್ಲಿ ಸರ್ಕಾರವು ರೈತರಿಗೆ ಸ್ಪ್ರಿಂಕ್ಲರ್ ಪೈಪ್ ಸೆಟ್ ಅನ್ನು ನೀಡುತ್ತಿದೆ. ಈ ಸ್ಪ್ರಿಂಕ್ಲರ್ ಪೈಪ್ ಸೆಟ್ ಅನ್ನು ಹೊರಗಡೆ ಖರೀದಿ ಮಾಡಿದರೆ ಸುಮಾರು 20ರಿಂದ 25 ಸಾವಿರ ರೂಪಾಯಿಗಳವರೆಗೆ ಹಣವನ್ನು ನೀಡಬೇಕಾಗುತ್ತದೆ ಆದರೆ ಹನಿ ನೀರಾವರಿ ಉಪಯೋಗವಾಗಲಿ ರೈತರಿಗೆ ಎಂದು ಸರ್ಕಾರ ಕೇವಲ 1800ಗಳಲ್ಲಿ ಮಾತ್ರ ಈ ಸ್ಪ್ರಿಂಕ್ಲರ್ ಪೈಪ್ ಸೆಟ್ ಅನ್ನು ನೀಡುತ್ತಿದೆ. ಹಾಗಾಗಿ ಯಾವ ರೀತಿ ರೈತರು ಸ್ಪ್ಲಿಂಕಲರ್ ಪೈಪ್ ಸೇಟ್ಟಿಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ,
ಅರ್ಜಿ ಸಲ್ಲಿಸುವ ವಿಧಾನ :
ಸ್ಪ್ರಿಂಕ್ಲರ್ ಪೈಪ್ ಸೆಟ್ ಗಾಗಿ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು https://kkisan.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ವೆಬ್ ಸೈಟ್ಗೆ ಲಾಗಿನ್ ಆದ ನಂತರ ಅದರಲ್ಲಿ ಎಫ್ ಐಡಿ ನಂಬರ್ ಅನ್ನು ಹಾಕಿದ ನಂತರ ರೈತರು ಸ್ಪ್ಲಿಂಕಲರ್ ಪೈಪ್ ಸೈಟ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವುದರ ಮೂಲಕ ಸಬ್ಸಿಡಿ ದರದಲ್ಲಿ ರೈತರು ಪಡೆದುಕೊಳ್ಳಲು ಅರ್ಜಿಯನ್ನು ಆಫ್ಲೈನ್ ಮೂಲಕವೂ ಸಹ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ವಿಧಾನ ಹೇಗೆ ? ಈ ಕಾರ್ಡ್ ಇಲ್ಲ ಅಂದರೆ ಹಣ ಇಲ್ಲ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಸರ್ಕಾರ ನೀಡುತ್ತಿರುವ ಸ್ಪ್ಲಿಂಕ್ಲರ್ ಪೈಪ್ಸೆಟ್ ಕಡಿಮೆ ದರದಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
- ಆರ್ ಟಿ ಸಿ ಪಹಣಿ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- 20 ರೂಪಾಯಿಯ ಸ್ಟ್ಯಾಂಪ್ ಪೇಪರ್
- ನೀರಿನ ಮೂಲದ ದೃಢೀಕರಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಜಾತಿ ಪ್ರಮಾಣ ಪತ್ರ
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹಂದಿ ಹತ್ತಿರದ ರೈತ ಸಂಪರ್ಕಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ 1800 ರೂಪಾಯಿಗಳ ಕಡಿಮೆ ದರದಲ್ಲಿ ಸ್ಲಿಂಕ್ಲರ್ ಪೈಪ್ ಸೆಟ್ ಅನ್ನು ನೀಡುತ್ತಿದ್ದು ಈ ಮಾಹಿತಿಯ ಬಗ್ಗೆ ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಅತಿ ಕಡಿಮೆ ದರದಲ್ಲಿ ಸರ್ಕಾರವು ನೀಡುತ್ತಿದೆ ಎಂಬುದನ್ನು ತಿಳಿಸುವುದರ ಮೂಲಕ ಈ ಪೈಪ್ ಸೆಟ್ ಅನ್ನು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮೊಬೈಲ್ ನಲ್ಲಿಯೇ ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ಪಡೆಯಿರಿ : ಇಲ್ಲಿದೆ ನೇರ ಲಿಂಕ್
- ರೈತರಿಗೆ ಶೇಕಡಾ 50 % ಸಬ್ಸಿಡಿ ಟ್ರ್ಯಾಕ್ಟರ್ ಖರೀದಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ