ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ಸ್ಮಾರ್ಟ್ ಫೋನ್ ಗಳು ಎಷ್ಟು ಸಹಾಯಕವಾಗಿರುತ್ತದೆಯೋ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ ಹಾಗಾಗಿ ನಾವು ಸ್ಮಾರ್ಟ್ ಫೋನ್ ಗಳನ್ನು ಬಳಸುವ ಸಂದರ್ಭದಲ್ಲಿ ಎಷ್ಟೇ ಜಾಗರೂಕರಾಗಿದ್ದರು ಸಹ ಕೆಲವೊಂದು ವಂಚನೆಗಳಿಗೆ ಒಳಗಾಗುತ್ತೇವೆ. ಜನಸಾಮಾನ್ಯರನ್ನು ಸ್ಕ್ಯಾಮರ್ಸ್ ಹಾಗೂ ಫೋನ್ ವಂಚಕರು ಲೂಟಿ ಮಾಡುತ್ತಿದ್ದಾರೆ ಇಂತಹ ತೊಂದರೆಗಳಿಂದ ಕೇಂದ್ರ ಸರ್ಕಾರವು ಜನರನ್ನು ತಪ್ಪಿಸಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೇಂದ್ರ ಸರ್ಕಾರದಿಂದ ನಿಯಮ :
ದಿನಗಳಲ್ಲಿ ನಾವು ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನು ಹಾಗೂ ಬ್ಯಾಂಕಿಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಗಳನ್ನು ಮೊಬೈಲ್ ನಲ್ಲಿಯೇ ಇಟ್ಟುಕೊಂಡಿರುವುದರಿಂದ ಬಹಳ ಉಪಾಯವಾಗಿ ಸ್ಕ್ಯಮರ್ಸ್ ಗಳು ಜನರನ್ನು ಮೋಸ ಮಾಡುತ್ತಿದ್ದಾರೆ ಈ ಕುರಿತು ಹಲವು ದೂರುಗಳು ಈಗಾಗಲೇ ಸರ್ಕಾರಕ್ಕೆ ದಾಖಲಾಗಿರುವುದನ್ನು ನಾವು ನೋಡಬಹುದು ಇನ್ನು ಮುಂದೆ ಕೆಲವೊಂದು ನಂಬರ್ ಗಳಿಂದ ಕರೆ ಅಥವಾ ಸಂದೇಶಗಳನ್ನು ಬರುತ್ತಿದ್ದರೆ ಅವುಗಳನ್ನು ಸರ್ಕಾರ ನಿರ್ಭಂಧಿಸಲು ನಿರ್ಧಾರ ಮಾಡಿದೆ.
ಕರೆ ಹಾಗೂ ಸಂದೇಶಗಳನ್ನು ತಿರಸ್ಕರಿಸಬೇಕು :
ಅಂತರಾಷ್ಟ್ರೀಯ ದೂರದ ಆಪರೇಟರ್ ಗಳಿಗೆ ಸರಿಯಾದ ಕಾಲರ್ ಲೈನ್ ಐಡೆಂಟಿಫಿಕೇಶನ್ ಇಲ್ಲದ ಅಥವಾ ಕೆಲವೊಂದು ಪೂರ್ವ ಪ್ರತ್ಯಯಗಳನ್ನು ಹೊಂದಿರುವ ಕರೆಗಳನ್ನು ಜನರು ತಿರಸ್ಕರಿಸುವಂತೆ ಸರ್ಕಾರವು ಸೂಚನೆ ನೀಡಿದ್ದು ಇದರ ಬಗ್ಗೆ ದೂರ ಸಂಪರ್ಕ ಇಲಾಖೆ ಅಧಿಕಾರ ವಹಿಸಿಕೊಂಡಿದೆ ಎಂದು ಕೆಲವೊಂದು ವರದಿಗಳು ತಿಳಿಸಿವೆ. ನಿರ್ದಿಷ್ಟವಾಗಿ ಈ ನಂಬರ್ಗಳ ಮೂಲಕ ಏನಾದರೂ ಕರೆಗಳು ಬಂದರೆ ಆ ನಂಬರ್ ನಕಲಿ ಕರೆಗಳು ಆಗಿದ್ದು ಕೂಡ ಈ ಕರೆಗಳಿಗೆ ನೀವು ಯಾರು ಸ್ಪಂದಿಸಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಆ ನಂಬರ್ಗಳು ಯಾವುವು ಎಂದರೆ, +11,011,11,+911ಹಾಗೂ +915.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
ಸರ್ಕಾರವು ಅಕ್ರಮ ಸೆಟಪ್ಗಳನ್ನು ಪತ್ತೆ ಹಚ್ಚಿದೆ :
ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಸಂಖ್ಯೆಗಳು ಮತ್ತು ನಕಲಿ ಕಾಲ ರೆಡಿ ಗಳಿಂದ ಹೆಚ್ಚುತ್ತಿರುವ ವಂಚನೆಗಳನ್ನು ಕರೆಗಳನ್ನು ಎದುರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಮೋಸದ ಅಭ್ಯಾಸಗಳನ್ನು ಸಕ್ರಿಯಗೊಳಿಸುತ್ತಿದ್ದ 65 ಟೆಲಿಕಾಂ ಸೆಟ್ಅಪ್‌ಗಳನ್ನು 2023 24ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನಿರ್ಬಂಧಿಸಿದೆ. 65 2023 24ರ ಹಣಕಾಸು ವರ್ಷದಲ್ಲಿ ಹಾಗೂ 2022 23ರ ಹಣಕಾಸು ವರ್ಷದಲ್ಲಿ 62 ಜೊತೆಗೆ 2021 2022ರ ಹಣಕಾಸು ವರ್ಷದಲ್ಲಿ 35 ಇಂತಹ ಅಕ್ರಮ ಸೆಟಪ್ಗಳನ್ನು ಸರ್ಕಾರವು ಪತ್ತೆ ಹಚ್ಚಿದ್ದು ಇದರ ಬಗ್ಗೆ ಲಿಖಿತ ಉತ್ತರದಲ್ಲಿ ರಾಜ್ಯ ಸಚಿವ ದೇವು ಸಿನ್ಹ ಚೌಹಾಣ್ ಲೋಕಸಭೆಗೆ ನೀಡಿದ್ದಾರೆ.
ಹೀಗೆ ಕೇಂದ್ರ ಸರ್ಕಾರವು ಂಚನೆಗಳನ್ನು ತಡೆಗಟ್ಟುವ ಸಲುವಾಗಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ದೂರಸಂಪರ್ಕ ಇಲಾಖೆಯು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು ಟೆಲಿಕಾಂ ಸೆಟ್ಅಪ್‌ಗಳನ್ನು ಸಕ್ರಿಯವಾಗಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಇಂತಹ ವಂಚನೆಗಳಿಗೆ ಯಾರು ಒಳಗಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆಲವೊಂದು ನಂಬರ್ ಗಳಿಂದ ಬರುವ ಸಂದೇಶಗಳನ್ನು ತಿರಸ್ಕರಿಸಬೇಕೆಂದು ದೇಶದ ಜನತೆಗೆ ಸೂಚನೆ ನೀಡಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು
- ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಉದ್ಯೋಗವಕಾಶ : 63,840 ರಿಂದ 73,790 ರೂ ವರೆಗೆ ವೇತನ