ನಮಸ್ಕಾರ ಸ್ನೇಹಿತರೇ ಈಗಾಗಲೇ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಹಲವಾರು ಯೋಜನೆ ಮಹಿಳೆಯರಿಗೆ ರಾಜ್ಯ ಸರ್ಕಾರವು ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ ಮೀಸಲಾಗಿದೆ. ರಾಜ್ಯಾದ್ಯಂತ ಉಚಿತವಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಬಸ್ ಪ್ರಯಾಣವನ್ನು ಮಹಿಳೆಯರು ಮಾಡುತ್ತಿದ್ದು ಪ್ರತಿ ತಿಂಗಳು 2000 ಹಣವನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಎಲ್ಲ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತರುತ್ತಿದೆ.

ಸಬ್ಸಿಡಿ ಸ್ಕೀಮ್ ಯೋಜನೆ :
ಮಹಿಳೆಯರ ಅಭಿವೃದ್ಧಿಗಾಗಿ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತಿದ್ದು ಈಗಾಗಲೇ ತಮ್ಮ ದೈನಂದಿನ ಮನೆ ಖರ್ಚು ನಿರ್ವಹಣೆ ಮಾಡಲು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಹಣವನ್ನು ಪಡೆಯುತ್ತಿದ್ದಾರೆ. ಅದರಂತೆ ಇದೀಗ ಎಲ್ಲಾ ಮಹಿಳೆಯರಿಗಾಗಿ ರಾಜ್ಯ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ 30000 ದಿಂದ 90 ಸಾವಿರ ರೂಪಾಯಿಗಳವರಿಗೆ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಉದ್ಯೋಗಿನಿ ಯೋಜನೆ :
ಮಹಿಳೆಯರು ಸ್ವಉದ್ಯೋಗ ಪ್ರಾರಂಭ ಮಾಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರವು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಮಹಿಳೆಯರಿಗೆ ಹಣಕಾಸು ನೆರವನ್ನು ಈ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ನೀಡುತ್ತಿದೆ. ಹೋಮ್ ಮೇಡ್ ಫುಡ್ ಪಾರ್ಲರ್ ಪ್ರಿಂಟಿಂಗ್ ಶಾಪ್ ಅಗರಬತ್ತಿ ತಯಾರಿಕೆ ಹೀಗೆ ಗುಡಿ ಕೈಗಾರಿಕೆಗಳನ್ನ ಮಾಡುವ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿಯಲ್ಲಿ ಧನಸಹಾಯವನ್ನು ರಾಜ್ಯ ಸರ್ಕಾರವು ನೀಡುತ್ತದೆ.
ಉದ್ಯೋಗಿನಿ ಯೋಜನೆಗೆ ಇರುವ ಅರ್ಹತೆಗಳು :
ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ. 18 ರಿಂದ 55 ವರ್ಷಗಳ ನಡುವೆ ಮಹಿಳೆಯರ ವಯಸ್ಸಿರಬೇಕು. ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಒಂದುವರೆ ಲಕ್ಷ ಕ್ಕಿಂತ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ಹೆಚ್ಚಿರಬಾರದು. ಮಹಿಳೆಯರು ಸ್ವಂತ ಉದ್ಯೋಗ ಮಾಡುತ್ತಿರುವುದರ ಬಗ್ಗೆ ಸೂಕ್ತ ದಾಖಲೆಯನ್ನು ಒದಗಿಸಬೇಕು.
ಇದನ್ನು ಓದಿ : KSET ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಣೆ : ಪಾಲಿಸಬೇಕಾದ ನಿಯಮ ಬಗ್ಗೆ ತಿಳಿದುಕೊಳ್ಳಿ
ಸಹಾಯಧನದ ಮೊತ್ತ :
ಸರ್ಕಾರವು ಮಹಿಳೆಯರಿಗೆ 30 ರಿಂದ 90 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿಯನ್ನು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ನೀಡುತ್ತದೆ. ಇಎಂಐ ಮೂಲಕ ಉಳಿದ ಸಾಲವನ್ನು ಮಹಿಳೆಯರು ಪಾವತಿ ಮಾಡಬೇಕಾಗುತ್ತದೆ ಒಟ್ಟು ಐದು ಲಕ್ಷದವರೆಗೆ ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು 1.5 ಲಕ್ಷದವರೆಗೆ ಸಬ್ಸಿಡಿ ಸಾಲ ಉಚಿತವಾಗಿ ಪರಿಶಿಷ್ಟ ವರ್ಗ ಮತ್ತು ಪಂಗಡದ ಮಹಿಳೆಯರಿಗೆ ಸಿಗಲಿದೆ.
ಉದ್ಯೋಗಿನಿ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಉದ್ಯೋಗಿನಿ ಯೋಜನೆಗೆ ಮಹಿಳೆಯರು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ರೇಷನ್ ಕಾರ್ಡ್ ವಿಳಾಸದ ಪುರಾವೆ ಉದ್ಯೋಗ ಮಾಡಲು ಬಯಸುವ ಉದ್ಯೋಗದ ಬಗ್ಗೆ ಮಾಹಿತಿ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಒಟ್ಟರಿಯಾಗಿ ರಾಜ್ಯ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದ್ದು ಅದರಂತೆ ಇದೀಗ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಪಡೆಯಬಹುದಾಗಿದೆ. ಸಾಲ ಸೌಲಭ್ಯವನ್ನು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಎಲ್ಲ ಬ್ಯಾಂಕುಗಳು ಒದಗಿಸುತ್ತವೆ. ಅದರ ಜೊತೆಗೆ ಸರ್ಕಾರದ ಅಧಿಕೃತ ವೆಬ್ಸೈಟ್ಗೂ ಕೂಡ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಂದು ಮಹಿಳೆಗೂ ಶೇರ್ ಮಾಡುವ ಮೂಲಕ ಸರ್ಕಾರದಿಂದ ಸ್ವಂತ ಉದ್ಯೋಗ ಮಾಡಲು ಸಹಾಯಧನ ಲಭ್ಯವಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಜನವರಿ 22ರಂದೇ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣ.?
- ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ : ನೀವು ಹೆಚ್ಚಿನ ಹಣ ಕಟ್ಟಬೇಕು ನೋಡಿ