News

ಪೌರತ್ವ ತಿದ್ದುಪಡಿ ಕಾಯ್ದೆ ಸದ್ಯದಲ್ಲಿಯೇ ಜಾರಿ : ಸಾಕಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ ತಿಳಿದುಕೊಳ್ಳಿ

The Citizenship Amendment Act will be implemented soon

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಶೀಘ್ರದಲ್ಲಿಯೇ ಮಹತ್ವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ. ಈ ಕಾನೂನನ್ನು 2024ರ ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಯಾಗಲಿದೆ ಎಂಬ ವಿಚಾರ ಒಂದು ಹೊರ ಬಿದ್ದಿದೆ.

The Citizenship Amendment Act will be implemented soon
The Citizenship Amendment Act will be implemented soon

ಈ ಬಗ್ಗೆ ಕೇಂದ್ರದ ಹಿರಿಯ ಸರ್ಕಾರಿ ಅಧಿಕಾರಿ ಇದ್ದರು ಮಾಹಿತಿಯನ್ನು ತಿಳಿಸಿದ್ದು ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲೇ 2019ರ ಪೌರತ್ವ ಕಾಯ್ದೆ ಮತ್ತು 2023ರ 3 ಹೊಸ ಕ್ರಿಮಿನಲ್ ಕಾನೂನುಗಳ ನಿಯಮಗಳನ್ನು ತಿಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಸಿಎಎಗಾಗಿ ನಿಯಮಗಳನ್ನು ಹೊರಡಿಸಲಿದ್ದೇವೆ ಎಂದು ಈ ಬಗ್ಗೆ ಅವರು ಮಾತನಾಡಿ ಹೇಳಿದ್ದಾರೆ. ಕಾನೂನನ್ನು ಜಾರಿಗೆ ತರಬಹುದು ಮತ್ತು ಅರ್ಹರಿಗೆ ಭಾರತೀಯ ಪೌರತ್ವವನ್ನು ನಿಯಮಗಳನ್ನು ಹೊರಡಿಸಿದ ನಂತರ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ :

2019 19 1955ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲಾಗಿದ್ದ ನಾಗರೀಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಮುಸ್ಲಿಂ ಧರ್ಮಿ ಯರು ಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಬಾಂಗ್ಲಾದೇಶ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಮುಸ್ಲಿಂ ಇತರ ನಿರಾಶ್ರಿತರಿಗೆ ಜೀವನ ನಡೆಸಲು ಸಾಧ್ಯವಾಗದೆ ಅವರು ಆಶ್ರಯವನ್ನು ಕಂಡುಕೊಂಡು ಭಾರತಕ್ಕೆ ಬಂದಿದ್ದು ಅಂತಹ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆ ಇದಾಗಿದೆ. ಈ ತಿದ್ದುಪಡಿ ವಿಧೇಯಕ ಒಂದು ಬಾರಿ ಜಾರಿಗೆ ಬಂದರೆ ಭಾರತದ ಪೌರತ್ವವನ್ನು ಈ ಮೂರು ದೇಶಗಳ ಹಿಂದೂ ಸೀಕು ಕ್ರೈಸ್ತ ಬೌದ್ಧ ಜೈನ ಮತ್ತು ಪಾರಥಿ ಸಮುದಾಯದ ವಲಸಿಗರು ಪಡೆಯುತ್ತಾರೆ. ನಂತರ ಅವರನ್ನು ಆಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ.

ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ


ಭಾರತದ ಪೌರತ್ವ ಪಡೆಯಲು ಇರುವ ಅರ್ಹತೆಗಳು :

ಭಾರತದ ಪೌರತ್ವಗಳಿಸಲು ಸಹಜವಾಗಿ ಬೇಕಾದ ಮುಖ್ಯ ಅರ್ಹತೆಗಳೆಂದರೆ ಕಳೆದ 12 ತಿಂಗಳಿನಿಂದ ವಲಸಿಗರು ಭಾರತದಲ್ಲಿ ನೆಲೆಸಿರಬೇಕು ಮತ್ತು ಹಿಂದಿನ 14 ವರ್ಷಗಳಲ್ಲಿ 11 ವರ್ಷ ಭಾರತದಲ್ಲಿ ಅವರು ನೆಲೆಸಿರಬೇಕಾಗುತ್ತದೆ. ಈ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ ತಿದ್ದುಪಡಿ ಮಸೂದಿ ಜಾರಿಗೆ ಬಂದರೆ 11 ವರ್ಷಗಳ ಬದಲು ಆರು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿರುವವರಿಗೆ ಭಾರತದ ಪೌರತ್ವ ಸಿಗುತ್ತದೆ. ಅವರು ಆದೇಶಗಳಿಂದ ಗಡಿಪಾರಿಗೆ ಒಳಗಾಗಿರಬಾರದು ಎಂದು ಹೇಳಿದ್ದು 1946ರ ವಿದೇಶಿ ಕಾಯ್ದೆ ಮತ್ತು 1920ರ ಪಾಸ್ಪೋರ್ಟ್ ಕಾಯ್ದೆಯ ಪ್ರಕಾರ ಜೈಲಿಗೆ ಅವರು ಹೋಗಿ ಬಂದಿರಬಾರದು ಅಂತವರು ಭಾರತದ ಪೌರತ್ವವನ್ನು ಪಡೆಯುತ್ತಾರೆ.

ಹೀಗೆ ಭಾರತದಲ್ಲಿ ಶೀಘ್ರದಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ ಎಂಬ ಮಾಹಿತಿಯು ಕೇಳಿ ಬರುತ್ತಿದ್ದು ಈ ಕಾಯ್ದೆಯನ್ನು ಜಾರಿಗೊಳಿಸಿದರೆ ನಮ್ಮ ದೇಶದಲ್ಲಿ ವಾಸಿಸುತ್ತಿರುವ ವಿದೇಶಿಗರು ಭಾರತದ ಪೌರತ್ವವನ್ನು ಪಡೆದಂತಾಗುತ್ತದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಸದ್ಯದಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...