ನಮಸ್ಕಾರ ಸ್ನೇಹಿತರೆ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಡವರಿಗೆ ಕೇಂದ್ರ ಸರ್ಕಾರವು ಉಚಿತ ಗ್ಯಾಸ್ ಅನ್ನು ನೀಡುತ್ತಿದ್ದು ಒಂದು ಸಿಲಿಂಡರ್ ಒಂದು ಗ್ಯಾಸ್ ಸ್ಟವ್ ಒಂದು ರೆಗ್ಯುಲೇಟರ್ ಕೂಡ ಈ ಯೋಜನೆಯ ಅಡಿಯಲ್ಲಿ ಉಚಿತವಾಗಿ ಸಿಗುತ್ತದೆ. ಇದಾದ ನಂತರ ಗ್ಯಾಸ್ ಮುಗಿದರೆ ಸಿಲಿಂಡರ್ ಗೆ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಕೂಡ ನೀಡುತ್ತದೆ.
ಐನೂರು ರೂಪಾಯಿಗೆ ಗ್ಯಾಸ್ ಸಿಲಿಂಡರ್ :
200 ರೂಪಾಯಿಗಳವರೆಗೆ ಇದುವರೆಗೂ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡುತ್ತಿದ್ದರು ಇನ್ನು ಮುಂದೆ 400 ರೂಪಾಯಿಗಳ ಸಹಾಯ ಧನ ನೀಡಲಾಗುತ್ತದೆ. ಪ್ರಸ್ತುತ 900 ರೂಪಾಯಿಗಳಷ್ಟು ಸಿಲಿಂಡರ್ ಬೆಲೆ ಇದ್ದು ಕೇಂದ್ರದಿಂದ 400 ರೂಪಾಯಿಗಳಷ್ಟು ಅನುದಾನ ಬಂದರೆ ಗ್ಯಾಸ್ ಸಿಲಿಂಡರ್ 500 ರೂಪಾಯಿಗಳಿಗೆ ಸಿಗುತ್ತದೆ. ಹೀಗೆ ಗ್ಯಾಸ್ ಸಿಲೆಂಡರ್ ಅನ್ನು 500 ರೂಪಾಯಿಗಳಿಗೆ ಪಡೆಯಬೇಕಾದರೆ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಅದಾದ ನಂತರವೇ ಈ ತಿಂಗಳಿನಿಂದ ಈ ಸೌಲಭ್ಯ ಸಿಗುತ್ತದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಹೊಸ ಖಾತೆ ತೆರೆಯಲು ಸೂಚನೆ , ಈ ಇಲಾಖೆಯಲ್ಲಿಯೆ ಅಕೌಂಟ್ ತೆರೆಯಿರಿ
ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಕಡ್ಡಾಯ :
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆಯುತ್ತಿರುವ ಗ್ಯಾಸಿಲಿಂಡರ್ ಗೆ ಸಬ್ಸಿಡಿಯನ್ನು ಪಡೆಯಬೇಕಾದರೆ ಏಜೆನ್ಸಿಗೆ ಭೇಟಿ ನೀಡಿ ಕೆವೈಸಿ ಮಾಡಿಸಬೇಕು. ಕೆ ವೈ ಸಿ ಯನ್ನು ಈ ತಿಂಗಳಿನಿಂದ ಯಾರು ಮಾಡಿರುತ್ತಾರೆ ಅವರಿಗೆ ಜನವರಿಯಿಂದ ಸಬ್ಸಿಡಿ ಸೌಲಭ್ಯ ಸಿಗುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಗ್ಯಾಸ್ ಪಡೆಯದಿದ್ದರೆ ಅವರು ಕೂಡ ಅರ್ಜಿಯನ್ನು ಈಗ ಸಲ್ಲಿಸಬಹುದಾಗಿದೆ.
ಹೀಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು 400 ರೂಪಾಯಿಗಳ ಸಬ್ಸಿಡಿ ನೀಡುತ್ತಿದ್ದು ಇನ್ನು ಮುಂದೆ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಮಹಿಳೆಯರು ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಮಹಿಳಾ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಜನವರಿಯಿಂದ ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಲಭ್ಯವಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಉಚಿತ ಮನೆ ವಿತರಣೆ : ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಿ
- Breaking News : 250 ಜನರ ಸಾವು 500 ಜನರು ಆಸ್ಪತ್ರೆ ಪಾಲು ಕೇವಲ 24 ಗಂಟೆಯಲ್ಲಿ