ನಮಸ್ಕಾರ ಸ್ನೇಹಿತರೆ ನೀವೇನಾದರೂ ಜಮೀನನ್ನು ಖರೀದಿಸಲು ಯೋಚಿಸುತ್ತಿದ್ದರೆ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಭೂ ಒಡೆತನ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರದಿಂದ ಸುಮಾರು 25 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಸಂಬಂಧಿಸಿದಂತೆ ಪ್ರಯೋಜನಗಳೇನು ಹಾಗೂ ಅಗತ್ಯ ದಾಖಲೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಭೂ ಒಡೆತನ ಯೋಜನೆ :
ತಮ್ಮ ವಾಸ ಸ್ಥಳದಿಂದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 10 ಕಿ.ಮೀ ಒಳಗೆ 2 ಎಕರೆ ಕೃಷಿಗೆ ಯೋಗ್ಯವಾದ ಖುಷ್ಕ ಅಥವಾ ಒಂದು ಎಕರೆ ಕರಿ ಜಮೀನು ಖರೀದಿಸಲು ಸರ್ಕಾರದಿಂದ ಸಹಾಯಧನ ಮತ್ತು ಸಾಲವನ್ನು ನೀಡಲಾಗುತ್ತಿದೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಗೋಡೆತನ ಯೋಜನೆ ಮಾಡಿ ನಿಗದಿಪಡಿಸಿರುವ ಘಟಕ ವೆಚ್ಚ 25 ಲಕ್ಷ ಇನ್ನುಳಿದಂತೆ 20 ಲಕ್ಷ ರೂಪಾಯಿಗಳನ್ನು ಇನ್ನುಳಿದ ಜಿಲ್ಲೆಗಳಿಗೆ ಶೇಕಡ 50 ರಷ್ಟು ಸಹಾಯಧನ ಹಾಗೂ ಶೇಕಡ 50ರಷ್ಟು ಸಾಲವನ್ನು ರಾಜ್ಯ ಸರ್ಕಾರವು ನೀಡುತ್ತಿದೆ.
ಭೂ ಒಡೆತನ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಮಹಿಳೆಯರಿಗೆ ವಿಶೇಷವಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ ಪಾಸ್ಪೋರ್ಟ್ ಸೈಜ್ ಫೋಟೋ , ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಹಿಳಾ ಅಭ್ಯರ್ಥಿಗಳು ಹೊಂದಿರಬೇಕು.
ಈ ನಿಗಮಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು :
ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಮಾತ್ರ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಅವುಗಳೆಂದರೆ, ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಂಡ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಹೀಗೆ ಕೆಲವೊಂದು ನಿಗಮಗಳ ಅಭ್ಯರ್ಥಿಗಳು ಮಾತ್ರ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ : ಯಾವ ದಿನಾಂಕದಂದು ನಡಿಯಲಿದೆ ಗೊತ್ತಾ?
ಅರ್ಜಿ ಸಲ್ಲಿಸುವ ವಿಧಾನ :
ಭೂ ಒಡೆತನ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಗತ್ಯ ದಾಖಲೆಗಳೊಂದಿಗೆ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು. https://sevasindhu.karnataka.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ. ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-12-2023 ರಂದು ನಿಗದಿಪಡಿಸಲಾಗಿದೆ.
ಹೀಗೆ ಅಭ್ಯರ್ಥಿಗಳು ಗ್ರಾಮವನ್ನು ಕರ್ನಾಟಕವನ್ನು ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಭೂ ಖರೀದಿಗಾಗಿ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಯೋಜನೆಗೆ ಸಂಬಂಧಿಸಿ ದಂತೆ ಮಾಹಿತಿಯನ್ನು ಹುಡುಕುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಸರ್ಕಾರದಿಂದ ಭೂಮಿ ಖರೀದಿಸಲು ಸಾಲ ಸೌಲಭ್ಯ ಹಾಗೂ ಸಹಾಯಧನ ಲಭ್ಯವಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ 35,000 ರೂ ಪ್ರೋತ್ಸಾಹ ಧನ ಎಲ್ಲರಿಗೂ ನೀಡಲಾಗುವುದು
ಇನ್ನು ಮುಂದೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ : ಈ ರೀತಿ ತಪ್ಪು ಮಾಡಬೇಡಿ