News

ಮೂರು ದೊಡ್ಡ ಉಡುಗೊರೆಗಳು ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ, ಹಣ ಹೆಚ್ಚಳ ಆಗಿದೆ ನೋಡಿ

Three big gifts for government employees in the budget

ನಮಸ್ಕಾರ ಸ್ನೇಹಿತರೆ 2024ರ ಭಾರತದ ಮಧ್ಯಂತರ ಬಜೆಟ್ ಮಂಡನೆಗೆ ಇದೀಗ ಕೇವಲ ಮೂರು ದಿನಗಳು ಮಾತ್ರ ಉಳಿದಿದ್ದು ಮಧ್ಯಂತರ ಬಜೆಟ್ 2024 ರಿಂದ ಸರ್ಕಾರಿ ನೌಕರರು ವಿಶೇಷ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ಫೆಬ್ರವರಿ ಒಂದರಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಬಜೆಟ್ ಮಂಡಿಸುವಾಗ ಕೇಂದ್ರ ನೌಕರರಿಗೆ ವೇತನ ಹೆಚ್ಚಳವನ್ನು ಘೋಷಿಸಬಹುದು.

Three big gifts for government employees in the budget
Three big gifts for government employees in the budget

ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳವಾಗಲಿದೆ :

ಬಹಳ ದಿನಗಳಿಂದ ಸರ್ಕಾರಿ ನೌಕರರು ವೇತನ ಪರಿಷ್ಕರಣಿಗಾಗಿ ಒತ್ತಾಯಿಸುತ್ತಿದ್ದಾರೆ ಕೇಂದ್ರ ಸರಕಾರಿ ನೌಕರರಿಗೆ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಮೂರು ದೊಡ್ಡ ಉಡುಗೊರೆಗಳನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸರ್ಕಾರವು ಬಜೆಟ್ ನಲ್ಲಿ ಸಂಬಳದ ಬಗ್ಗೆ ಜನಪರ ಘೋಷಣೆಗಳನ್ನು ಮಾಡಬಹುದು. ತಮ್ಮ ಬೇಡಿಕೆಗಳನ್ನು ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ಒಪ್ಪಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು ಇದ್ದಾರೆ.

ಇದೀಗ ಫಿಟ್ನೆಂಟ್ ಅಂಶವನ್ನು ಸರ್ಕಾರವು 2024ರ ಬಜೆಟ್ ನಲ್ಲಿ ಹೆಚ್ಚಿಸುವುದು. ಎಂಟನೇ ವೇತನ ಆಯೋಗ ಹಾಗೂ 18 ತಿಂಗಳ ಡಿಎ ಬಾಕಿಗಳನ್ನು ತರುವ ಬಗ್ಗೆ ಘೋಷಿಸುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ವಿತ ಸಚಿವೆ ನಿರ್ಮಲ ಸೀತಾರಾಮನ್ ರವರು ಫೆಬ್ರವರಿ ಒಂದರಂದು ಬಜೆಟ್ ಮಂಡನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ವೇತನ ಹೆಚ್ಚಳವನ್ನು ಘೋಷಿಸಬಹುದು.

ವೇತನ ಪರಿಷ್ಕರಣೆಗಾಗಿ ಸರ್ಕಾರಿ ನೌಕರರು ಬಹು ದಿನಗಳಿಂದ ಆಗ್ರಹಿಸುತ್ತಿದ್ದಾರೆ ಈ ಬಗ್ಗೆ ಹಲವು ಬಾರಿ ಸರ್ಕಾರಿ ನೌಕರರ ಸಂಘದ ಜೊತೆ ಚರ್ಚೆ ನಡೆಸಲಾಗಿದೆ. ಸರ್ಕಾರಿ ನೌಕರರ ಕನಿಷ್ಠ ಮೂಲವೇತನ 18000 ದಿಂದ 26 ಸಾವಿರ ರೂಪಾಯಿಗಳವರೆಗೆ ಆಗಬಹುದು ಅಂದರೆ ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸಿದರೆ ಮಾತ್ರ.

ಇದನ್ನು ಓದಿ ;ರಾಜ್ಯದ ಜನತೆಗೆ 6 ಗ್ಯಾರಂಟಿ ಯೋಜನೆ : ತಪ್ಪದೆ ತಿಳಿದುಕೊಂಡಿ ಅರ್ಜಿ ಸಲ್ಲಿಸಿ


8ನೇ ವೇತನ ಸಿ :

ಸರ್ಕಾರವು ಕೇಂದ್ರ ಬಜೆಟ್ ನ 2024ರಲ್ಲಿ ಎಂಟನೇ ವೇತನ ಆಯೋಗವನ್ನು ಘೋಷಿಸಬಹುದು ಇದನ್ನು ಸರ್ಕಾರ ಮಾಡಿದರೆ ಸಣ್ಣ ಹುದ್ದೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಸಂಬಳವೂ ಕೂಡ ಹೆಚ್ಚಾಗುತ್ತದೆ ಆದರೆ ಪ್ರಸ್ತುತ ಸರ್ಕಾರವು ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಈ ಹಿಂದೆಯೇ ಹೇಳಿದೆ ಆದರೆ ಈ ವರ್ಷ ಚುನಾವಣಾ ವರ್ಷವಾಗಿರುವ ಕಾರಣ ನೌಕರರಿಗೆ ಈ ಸಂದರ್ಭದಲ್ಲಿ ಸರ್ಕಾರ ಶುಭ ಸುದ್ದಿ ನೀಡಬಹುದು.

18 ತಿಂಗಳ ಡಿಎ ಬಾಕಿ ನಿರೀಕ್ಷೆ :

ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಕೇಂದ್ರ ಸರ್ಕಾರವು ಕೇಂದ್ರ ನೌಕರರ ಡಿಎ ಯನ್ನು ಹೆಚ್ಚಿಸುತ್ತದೆ ಆದರೆ ಸರ್ಕಾರವು ಜನವರಿ 20 ರಿಂದ ಜೂನ್ 2021 ರವರೆಗೆ ಕೋವಿಡ್ ಸಮಯದಲ್ಲಿ ಯಾವುದೇ ಡಿಎ ಎಂದು ಹೆಚ್ಚಿಸಲಿಲ್ಲ. ಇದರ ನಂತರ ನೇರವಾಗಿ ಡಿಎ ಯನ್ನು ಸರ್ಕಾರವು ಹೆಚ್ಚಿಸಿತು. ಶೇಕಡ 11 ಅದಕ್ಕೂ ಮೊದಲು ಮೂರು ಬಾರಿ ಡಿ ಎ ಯನ್ನು ಜುಲೈ ಒಂದು 2021 ರಂದು ಹೆಚ್ಚಿಸಲಾಗಿಲ್ಲ ಎಂದು ಹೇಳಿಲ್ಲ.

ಒಟ್ಟಾರೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಮೂರು ದೊಡ್ಡ ಉಡುಗೊರೆಗಳು ಕಾದಿರಬಹುದು ಆದರೆ ಇದು ಇನ್ನೂ ಬಜೆಟ್ ಮಂಡನೆಯಾದ ನಂತರವೇ ತಿಳಿಯುತ್ತದೆ ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಕೇಂದ್ರ ಸರ್ಕಾರ ನೌಕರರು ಆಗಿದ್ದರೆ ಅವರಿಗೆ ಈ ವರ್ಷದ ಬಜೆಟ್ ಬಗ್ಗೆ ತಿಳಿದುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...