News

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ

Three days of heavy rain in these districts of Karnataka

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಮಳೆಯ ಕುರಿತು ದೈನಂದಿನ ವರದಿಯನ್ನು ಬಿಡುಗಡೆ ಮಾಡಿದ್ದು ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 23 ರಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ನೋಡಬಹುದಾಗಿದೆ.

Three days of heavy rain in these districts of Karnataka
Three days of heavy rain in these districts of Karnataka

ಹವಾಮಾನ ಇಲಾಖೆಯಿಂದ ಮುನ್ಸೂಚನೆ :

ನವೆಂಬರ್ 23ರಿಂದ ಮೂರು ದಿನಗಳ ಕಾಲ ಹವಾಮಾನ ಇಲಾಖೆಯು ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯನ್ನು ನೀಡಿದ್ದು ಬೆಳಗಾವಿ ಗದಗ ಕೊಪ್ಪಳ ದಕ್ಷಿಣ ಕನ್ನಡ ಉಡುಪಿ, ಬೆಂಗಳೂರು ಗ್ರಾಮಾಂತರ ರಾಯಚೂರು, ಬೆಂಗಳೂರು ನಗರ ಚಿಕ್ಕಬಳ್ಳಾಪುರ ಕೊಡಗು ಕೋಲಾರ ಚಾಮರಾಜನಗರ ಚಿಕ್ಕಮಗಳೂರು ತುಮಕೂರು ರಾಮನಗರ ಶಿವಮೊಗ್ಗ ವಿಜಯನಗರ ಹಾಗೂ ಮೈಸೂರಿನಲ್ಲಿ ಮಳೆ ಆಗಲಿದೆ ಎಂಬ ಮಾಹಿತಿಯನ್ನು ರಾಜ್ಯದ ಜನತೆಗೆ ನೀಡಿದೆ. ಮುಂದಿನ ಎರಡು ದಿನ ಕರ್ನಾಟಕ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂಬ ವರದಿಯನ್ನು ಹವಾಮಾನ ಇಲಾಖೆಯ ತಿಳಿಸಿದೆ.

ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ :

ಹಗುರ ಮಳೆ ಎಂದರೆ 2.5 ಮಿಲಿ ಮೀಟರ್ ನಿಂದ 64.5 ಮಿಲಿಮೀಟರ್ ವರೆಗೆ ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆ ಪ್ರಕಟಣೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ ಮಳೆ ಯಾಗಲಿದೆ. ನವೆಂಬರ್ 23 ಹಾಗೂ 24ರಂದು ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಅನ್ನು ನೀಡಿದೆ.

ಮುಂಗಾರು ಮಳೆರಾಯನ ಆಗಮನ :

ನವೆಂಬರ್ 24ರಂದು ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು ಆ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣಹವಿ ವಾತಾವರಣ ಕಂಡು ಬಂದಿದ್ದು ಹಿಂಗಾರು ಮಳೆಯು ಸಹ ಕ್ಷೀಣ ವಾಗಿತ್ತು ಆದರೆ ಇದೀಗ ಮತ್ತೆ ಹಿಂಗಾರು ಚುರುಕುಗೊಂಡಿದ್ದು ಮಳೆರಾಯನ ಆಗಮನ ಶುರುವಾಗಲಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವು ಮುಂದಿನ 48 ಗಂಟೆಗಳ ಒಳಗೆ ಕಂಡು ಬರಲಿದೆ ಆದರೆ ಅದೇ ರೀತಿ ಕರಾವಳಿ ಭಾಗದಲ್ಲಿಯೂ ಸಹ ವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬುದರ ಮಾಹಿತಿಯನ್ನು ನೀಡಿದೆ.

ತಮಿಳುನಾಡಿನ ಈ ಜಿಲ್ಲೆಗೆ ಆರೇಂಜ್ ಅಲರ್ಟ್ ಘೋಷಣೆ :

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಗೆ ಐ ಎಂ ಡಿ ಭಾರಿ ಮಳೆ ಘೋಷಿಸಿದ್ದು ತಮಿಳುನಾಡಿನ ರಾಜ್ಯದ ಇತರ ಎಂಟು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಇವುಗಳಲ್ಲದೆ ತಮಿಳುನಾಡಿನ ತಿರುಳೂರು ಜಿಲ್ಲೆ ಸೇರಿದಂತೆ ತಿರುನಲ್ಲಿ ರಾಮನಾಥಪುರಂ ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂಬುದರ ಮಾಹಿತಿಯನ್ನು ಚೆನ್ನೈನ ಪ್ರಾದೇಶಿಕ ಹವಾಮಾನ ಇಲಾಖೆಯ ತಮಿಳುನಾಡಿನ ಜನತೆಗೆ ತಿಳಿಸಿದೆ.


ಹೀಗೆ ಕರ್ನಾಟಕದಲ್ಲಿ ಹಿಂಗಾರು ಮಳೆಯ ಆಗಮನವು ಶುರುವಾಗಿದ್ದು ಕೆಲವೊಂದು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ಎಲ್ಲೋ ಅಲಾಟನ್ನು ಘೋಷಣೆ ಮಾಡಿದ್ದು ಅದರಂತೆ ತಮಿಳುನಾಡಿನ ಜಿಲ್ಲೆಗಳಲ್ಲಿಯೂ ಸಹ ಅತಿ ಹೆಚ್ಚು ಮಳೆ ಆಗುತ್ತಿರುವ ಪರಿಣಾಮವಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಿರುವುದನ್ನು ಈ ಲೇಖನದಲ್ಲಿ ನೋಡಬಹುದಾಗಿದ್ದು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಮುಂದಿನ ಮೂರು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ

ಕೃಷಿ ಹೊಂಡ ನಿರ್ಮಿಸಲು ರೈತರಿಗೆ 4 ಲಕ್ಷ ಸಹಾಯಧನ : ಈ ಅರ್ಜಿ ಭರ್ತಿ ಮಾಡಿ

Treading

Load More...