ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ಕೃಷಿ ಯಂತ್ರೋಪಕರಣಗಳು ಕೃಷಿಯಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವ ರೈತರ ನಡುವೆ ನಾಲ್ಕು ಕಟಾವು ಅಥವಾ ಕೊಯ್ಲು ಯಂತ್ರಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಆಧುನಿಕ ಯಂತ್ರಗಳು ಸಮಯ ಮತ್ತು ಶ್ರಮ ಉಳಿತಾಯ ಮಾಡಲು ಅತ್ಯಗತ್ಯವಾಗಿದೆ. ಹಾಗಾದರೆ ಆ ಯಂತ್ರಗಳು ಯಾವುವು? ಅವುಗಳು ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದಾಗಿದೆ.
- ರೀಪರ್ ಬೈಂಡರ್ :
ರಿಪರ್ ಬೈಂಡರ್ ಸಣ್ಣ ಹೊಲಗಳಿಗೆ ಉತ್ತಮವಾಗಿದ್ದು ಎರಡು ತರಹದ ರೀತಿಯಲ್ಲಿ ಕೆಲಸ ಮಾಡಬಲ್ಲದು. ಇದು ಕೇವಲ ಬೆಳೆಯನ್ನು ಕೊಯ್ಲು ಮಾಡುವುದಲ್ಲದೆ ಅವುಗಳನ್ನು ಕಟ್ಟುತ್ತದೆ. ಈ ಯಂತ್ರದಿಂದ ಬಾರ್ಲಿ ಗೋಧಿ ಮತ್ತು ಬತ್ತದಂತಹ ವಿವಿಧ ಬೆಳೆಗಳೊಂದಿಗೆ ಸಹಾಯ ಮಾಡಬಹುದಾಗಿತ್ತು ರೈತರಿಗೆ ಸಣ್ಣ ಪ್ರಮಾಣದಲ್ಲಿ ಈ ಯಂತ್ರವು ಸೂಕ್ತವಾಗಿದೆ. ಬ್ರಾಂಡ್ನಿಂದ ಬೆಲೆಗಳು ಬದಲಾಗುತ್ತಿದ್ದು 80000 ಗಳಿಂದ ಸಾಮಾನ್ಯವಾಗಿ ಪ್ರಾರಂಭವಾಗಿ ಸುಮಾರು 4 ಲಕ್ಷಗಳವರೆಗೆ ಈ ಯಂತ್ರವನ್ನು ಪಡೆಯಬಹುದಾಗಿದೆ. ಶೇಕಡಾ 50% ವರೆಗೆ ಸಬ್ಸಿಡಿಯನ್ನು ಕೃಷಿ ಯಂತ್ರೋಪಕರಣ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದ್ದು ಇದರಿಂದ ಆರ್ಥಿಕ ಹೊರೆಯನ್ನು ಸರಾಗಗೊಳಿಸುತ್ತದೆ.
Vst Shakti Honda GX200, Khedut reaper binder,Bsc 280 Reaper Binder Agriculture and Greenlend MDS39 ಈ ರೀತಿಯಾಗಿ ಜನಪ್ರಿಯ ಯಂತ್ರಗಳು ಇದರಲ್ಲಿ ಕಾಣಿಸುತ್ತವೆ.
- ಕಂಬೈನ್ ಹಾರ್ವೆಸ್ಟರ್:
ಕೊಯ್ಲು ಒಕ್ಕೂವ ಮತ್ತು ತೂರಿ ರಾಶಿ ಮಾಡಲು ಈ ಯಂತ್ರವು ಸಹಾಯ ಮಾಡುತ್ತದೆ ಇದು ದೊಡ್ಡ ಪ್ರಮಾಣದ ಕೃಷಿಗೆ ಹೆಚ್ಚು ಸೂಕ್ತವಾಗಿದ್ದು ವ್ಯಾಪಕ ಸಾಮರ್ಥ್ಯಗಳಿಂದಾಗಿ ಇದು ವಿವಿಧ ಬೆಳೆಗಳಿಗೆ ಪರಿಣಾಮಕಾರಿಯಾಗಿದೆ. ಈ ಯಂತ್ರದಲ್ಲಿರುವ ಜನಪ್ರಿಯ ಯಂತ್ರಗಳೆಂದರೆ, Mahendra Harvest Master H12, Swaraj 8100 EXPreet 987, and John Deere W70 Synchrosamrt ಇವುಗಳಲ್ಲಿ ಯಂತ್ರವು ಲಭ್ಯವಿದ್ದು ಇದರ ವೆಚ್ಚವು 10 ಲಕ್ಷದಿಂದ 50 ಲಕ್ಷಗಳವರೆಗೆ ಇರುತ್ತದೆ. ಸರ್ಕಾರಿ ಸಬ್ಸಿಡಿಗಳು 50% ವರೆಗೆ ಲಭ್ಯವಿದ್ದು ಇದರ ಮಾದರಿಯನ್ನು ಅವಲಂಬಿಸಿ ಗರಿಷ್ಠ 7 ಲಕ್ಷದಿಂದ ಲಕ್ಷಗಳ ವರೆಗೆ ಅನುದಾನ ಇರುತ್ತದೆ.
3.ಬ್ರಷ್ ಕಟ್ಟರ್ :
ಹಗುರವಾದ ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು ಬ್ರಷ್ ಕಟರ್ ಇದರಿಂದ ಹುಲ್ಲು ಮೇವು ಮತ್ತು ಹೆಚ್ಚಿನದನ್ನು ಕತ್ತರಿಸಲು ಹೆಚ್ಚು ಸೂಕ್ತವಾಗಿದೆ ರೈತರಿಗೆ ಇದು ಸಣ್ಣ ಕೆಲಸಗಳಿಗೆ ಉಪಯೋಗ ಮತ್ತು ಸೂಕ್ತವಾಗಿದೆ.
ಬ್ರಷ್ ಕಟ್ಟರ್ ನಲ್ಲಿರುವ ಜನಪ್ರಿಯ ಯಂತ್ರಗಳೆಂದರೆ,Honda UMK435T U2NT , Husqvarna 143R-II , Husqvarna 532RBS Backpack and Neptune BC -360 Side Pack ಈ ಯಂತ್ರವು ಕೆಲವೊಂದು ವಿಶೇಷಗಳನ್ನು ಅವಲಂಬಿಸಿ 20 ಸಾವಿರ ರೂಪಾಯಿ ಇಂದ 35,000ಗಳ ವರೆಗೆ ಲಭ್ಯವಿದೆ. ಐವತ್ತು ಪರ್ಸೆಂಟ್ ವರೆಗೆ ಸಬ್ಸಿಡಿ ಅನ್ನು ಕೃಷಿ ಯಂತ್ರೋಪಕರಣ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ ಸ್ಥಳೀಯ ಕೃಷಿ ಇಲಾಖೆಗಳಲ್ಲಿ ಇದರ ವಿವರಗಳು ಪಡೆಯಬಹುದಾಗಿದೆ.
- ನೇಗಿಲು :
ನೇಗಿಲುಗಳು ಫಲವತ್ತಾದ ಬೀಜದ ಹಾಸಿಗೆಯನ್ನು ಮಣ್ಣಿನ ಸಿದ್ಧತೆ ಮತ್ತು ಕಳೆ ನಿಯಂತ್ರಣಕ್ಕೆ ಅಗತ್ಯವಾಗಿ ರಚಿಸುವಲ್ಲಿ ನಿರ್ಣಾಯಕವಾಗಿದೆ. ಇದು ಮಣ್ಣಿನ ಗಾಳಿ ನೀರಿನ ಧಾರಣವನ್ನು ಹೆಚ್ಚಿಸುವುದಲ್ಲದೆ ಮಣ್ಣಿನಲ್ಲಿ ಸಾವಯವ ವಸ್ತುಗಳನ್ನು ಸಹ ಸೇರಿಸುತ್ತವೆ. ನೇಗಿಲಿನಲ್ಲಿ ಸಿಗುವಂತಹ ಜನಪ್ರಿಯ ಯಂತ್ರಗಳು ಯಾವುವೆಂದರೆ , Mahendra Reversible Plough, Lemken OPAL 080 E 2MB ಈ ಯಂತ್ರೋಪಕರಣಗಳು 25,000 ಗಳಿಂದ ಪ್ರಾರಂಭವಾಗಿ 48 ಸಾವಿರ ರೂಪಾಯಿಗಳವರೆಗೆ ಲಭ್ಯವಿದೆ. 50 ಪರ್ಸೆಂಟ್ ವರೆಗೆ ನೇಗಿಲಿಗೆ ಸರ್ಕಾರದಿಂದ ಸಬ್ಸಿಡಿ ಅನ್ನು ರೈತರಿಗೆ ನೀಡಲಾಗುತ್ತಿದೆ.
ಹೀಗೆ ಇವತ್ತಿನ ಲೇಖನದಲ್ಲಿ ನಾಲ್ಕು ತಾಪಾದಂತಹ ಯಂತ್ರೋಪಕರಣಗಳು ರೈತರಿಗೆ ಲಭ್ಯವಿದ್ದು , ಈ ಯಂತ್ರೋಪಕರಣಗಳು ರೈತರಿಗೆ ಹೆಚ್ಚಿನದಾಗಿ ಉಪಯೋಗವನ್ನು ನೀಡುತ್ತವೆ. ಇದರಿಂದಾಗಿ ಸರ್ಕಾರದಿಂದಲೂ ಸಹ ಸಬ್ಸಿಡಿಯನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಸಹ ಸರ್ಕಾರದಿಂದ ಸಬ್ಸಿಡಿಯನ್ನು ಪಡೆದು ಈ ಯಂತ್ರೋಪಕರಣಗಳನ್ನು ಖರೀದಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ದೂರವಾಣಿಗೆ ಕರೆ ಮಾಡಿ ಹಣ ಪಡೆಹಿರಿ
ಕೃಷಿ ಹೊಂಡ ನಿರ್ಮಿಸಲು ರೈತರಿಗೆ 4 ಲಕ್ಷ ಸಹಾಯಧನ : ಈ ಅರ್ಜಿ ಭರ್ತಿ ಮಾಡಿ