News

ಟ್ರಾಕ್ಟರ್ ಪರೇಡ್ : ದೇಶದ 500 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವಕ್ಕೆ ರೈತರಿಂದ ಸಿದ್ಧತೆ

Tractor Parade

ನಮಸ್ಕಾರ ಸ್ನೇಹಿತರೆ ಸುಮಾರು 500 ಜಿಲ್ಲೆಗಳಲ್ಲಿ ದೇಶದಾದ್ಯಂತ ಗಣರಾಜ್ಯೋತ್ಸವದ ದಿನದಂದು ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತರು ನಿರ್ಧರಿಸಿದ್ದು ಗುರುವಾರ ಪ್ರಕಟಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಟ್ರ್ಯಾಕ್ಟರ್ ಪೆರೇಡ್ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ಔಪಚಾರಿಕ ಗಣರಾಜ್ಯೋತ್ಸವ ಪರೇಡ್ನ ಮುಕ್ತಾಯದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ನಡೆಯಲಿದೆ ಎಂದು ಹೇಳಲಾಗಿದೆ.

Tractor Parade
Tractor Parade

ರೈತರಿಂದ ಟ್ರ್ಯಾಕ್ಟರ್ ಪರೇಡ್ :

ಜನವರಿ 26 2024 ರಂದು ಟ್ರ್ಯಾಕ್ಟರ್ ಪೆರೇಡ್ ಅನ್ನು ಎಸ್ ಕೆ ಎಂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸಲಿದ್ದು ಕನಿಷ್ಠ 500 ಜಿಲ್ಲೆಗಳಲ್ಲಿ ಈ ಟ್ರಾಕ್ಟರ್ ಬರೆಯುವ ನಿರೀಕ್ಷೆ ಮಾಡಲಾಗುತ್ತಿದೆ. ಎಸ್ ಕೆ ಎಂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದು ಗಣರಾಜ್ಯೋತ್ಸವದ ಔಪಚಾರಿಕ ಮರವಣಿಗೆಯು ದೆಹಲಿಯಲ್ಲಿ ಸಮಾರೋಪ ನಡೆದ ನಂತರ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ ಎಂದು ಅಧಿಕೃತವಾಗಿ ಸಂಘಟನೆ ಪ್ರಕಟಣೆಯಲ್ಲಿ ಹೊರಡಿಸಿದೆ.

ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ

ಎಸ್ಕೆಎಂನಿಂದ ಟ್ರಾಕ್ಟರ್ :

ರಾಷ್ಟ್ರಧ್ವಜವನ್ನು ಪರೇಡ್ ನಲ್ಲಿ ರೈತರು ಸಂಘ ಸಂಸ್ಥೆಗಳ ಧ್ವಜದೊಂದಿಗೆ ಹಾರಿಸಲಿದ್ದು ರೈತರು ಭಾರತದ ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ ಒಕ್ಕೂಟ ಜಾತ್ಯತೀತತೆ ಮತ್ತು ಸಮಾಜವಾದದ ತತ್ವಗಳನ್ನು ರಕ್ಷಿಸಲು ಪ್ರತಿಜ್ಞೆ ಮಾಡಲಿದ್ದಾರೆ. ಟ್ರ್ಯಾಕ್ಟರ್ ಗಳ ಜೊತೆಗೆ ಇತರ ವಾಹನಗಳು ಮತ್ತು ಮೋಟರ್ ಸೈಕಲ್ ಗಳು ಕೂಡ ಪರೇಡ್ ನಲ್ಲಿ ಸೇರಿಕೊಳ್ಳಲಿವೆ ಎಂದು ಎಸ್ ಕೆ ಎಂ ತಿಳಿಸಿದ್ದು, ರಾಜ್ಯ ಘಟಕಗಳು 20 ರಾಜ್ಯದಲ್ಲಿನ ಎಸ್ ಕೆ ಎಂ ಮುಂದಿನ ವರ್ಷ ಅತ್ಯಂತ ಜನವರಿ 10 ರಿಂದ 20ರವರೆಗೆ ಮನೆ ಭೇಟಿ ಮತ್ತು ಕರಪತ್ರಗಳ ವಿತರಣೆ ಮೂಲಕ ಜನ ಜಾಗರಣ ಅಭಿಯಾನವನ್ನು ನಡೆಸಲಿವೆ ಎಂದು ತಿಳಿಸಲಾಗಿದೆ.


ಹೀಗೆ ರೈತರಿಂದ ಗಣರಾಜ್ಯೋತ್ಸವದ ದಿನದಂದು ಟ್ರ್ಯಾಕ್ಟರ್ ಪರೇಡ್ ನಡೆಯಲಿದ್ದು ಈ ಬಗ್ಗೆ ಹೆಚ್ಚಿನ ರೈತರು ಆ ಪರೇಡ್ ನಲ್ಲಿ ಭಾಗವಹಿಸಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಮಾಡಲಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪೆರೇಡ್ ನಡೆಯಲಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...