ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರವು ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಂತೆ ಗ್ಯಾರಂಟಿ ಯೋಜನೆಗಳು ಜಾರಿಯಾಗಿ ತನ್ನದೇ ಆದ ಮಹತ್ವವನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ .ಇದೀಗ ಮತ್ತೊಂದು ಯೋಜನೆಯನ್ನು ಜಾರಿ ತಂದಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.
ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳನ್ನು ಜಾರಿಗೆ ತಂದು ಇದರೊಂದಿಗೆ ಇನ್ನೂ ಸಹ ಅನೇಕ ಯೋಜನೆಗಳನ್ನು ಜಾರಿಗೆ ತರುವ ಯೋಚನೆಯಲ್ಲಿದೆ .ಇದರಲ್ಲಿ ಬಹುಮುಖ್ಯವಾಗಿ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ಸರ್ಕಾರ ನಿರ್ಧರಿಸಿದೆ. ಹೌದು 2023 ನೇ ಸಾಲಿನಲ್ಲಿ ಅಂಗವಿಕಲಕರಿಗೆ ಕಾಂಗ್ರೆಸ್ ಸರ್ಕಾರವು ತ್ರಿಚಕ್ರ ವಾಹನ ನೀಡಲು ತೀರ್ಮಾನಿಸಿದೆ .ಇದರ ಬಗ್ಗೆ ತಿಳಿಯೋಣ ಹೇಗೆ ವಿತರಣೆ ಮಾಡಲಾಗುವುದು .
ದೈಹಿಕ ವಿಕಲಚೇತನರಿಗೆ ವಾಹನ :
ಹೌದು ಕರ್ನಾಟಕ ರಾಜ್ಯದಲ್ಲಿ ಇರುವ ದೈಹಿಕ ವಿಕಲಚೇತನರು ತಮ್ಮ ಸಾವಲಂಬಿ ಜೀವನ ಸಾಗಿಸಲು ಸರ್ಕಾರವು ಒಂದು ಮಹತ್ವದ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ .ಇದರಿಂದ ಯಾರೂ ದೈಹಿಕ ವಿಕಲಚೇತನರಾಗಿದ್ದಾರೆ ಅಂತಹವರಿಗೆ 4000 ಯಂತ್ರ ಚಾಲಿತ ವಾಹನವನ್ನು ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಸರ್ಕಾರ 36ಕೋಟೆಯನ್ನು ಅಂದಾಜು ವೆಚ್ಚದಲ್ಲಿ ವಿಕಲಚೇತನರಿಗೆ ಯಂತ್ರ ಚಾಲಿತ ವಾಹನ ಖರೀದಿಸಲು ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ಚರ್ಚೆ ಮಾಡುವ ಮುಖಾಂತರ ಅವರಿಗೆ ವಾಹನವನ್ನು ನೀಡಲು ಸಿದ್ದರಾಮಯ್ಯನವರು ತಿಳಿಸಿದ್ದಾರೆ .ಹೀಗಾಗಿ ಅವರಿಗೆ ಹೆಚ್ಚು ಅನುಕೂಲ ಆಗಲಿದೆ.
ಈ ಮೂಲಕ ಕರ್ನಾಟಕದಾದ್ಯಂತ ಇರುವಂತಹ ವಿಕಲಚೇತನರಿಗೆ ಬೇಕಾಗುವ ವಾಹನಗಳನ್ನು ಪಡೆಯಲು ಅರ್ಜಿಯನ್ನು ಸಹ ಆಹ್ವಾನಿಸಲಾಗುತ್ತದೆ .ಆಗ ಅಂಗವಿಕಲ ಚೇತನರು ಅರ್ಜಿಯನ್ನು ಸಲ್ಲಿಸುವ ಮೂಲಕ ವಾಹನವನ್ನು ಪಡೆದುಕೊಂಡು ತಮ್ಮ ಸ್ವಾವಲಂಬಿ ಜೀವನವನ್ನು ಸಾಗಿಸಲು ಸರ್ಕಾರವು ನೆರವನ್ನು ನೀಡುತ್ತಿದೆ.ಇದನ್ನು ಎಲ್ಲರೂ ಸಹ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ತ್ರಿಚಕ್ರವಾಹನ ನೀಡುವ ಮೂಲಕ ಅಂಗವಿಕಲರ ಜೀವನದಲ್ಲಿ ಒಂದು ಮಹತ್ವದ ಬದಲಾವಣೆಯನ್ನು ಕಾಣಬೇಕೆಂದು ಸರ್ಕಾರ ಜಾರಿಗೆ ತಂದಿರುವ ಒಂದು ಬಹುಮುಖ್ಯ ಯೋಜನೆಯಾಗಿದೆ. ಇದೇ ರೀತಿಯ ಹೊಸ ಹೊಸ ಯೋಜನೆಗಳು ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ, ಧನ್ಯವಾದಗಳು.