ನಮಸ್ಕಾರ ಸ್ನೇಹಿತರೆ, ಆಧಾರ್ ಕಾರ್ಡ್ ನಮ್ಮ ದೇಶದ ಬಹುಮುಖ್ಯ ದಾಖಲೆಯಾಗಿದ್ದು ಈ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವುದು ಈಗ ಕಡ್ಡಾಯವಾಗಿದೆ. ಹಾಗಾಗಿ ತಪ್ಪದೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಬಗ್ಗೆ ಮಾಹಿತಿ :
ಸುಮಾರು 10 ವರ್ಷಗಳಿಗಿಂತಲೂ ಹಳೆಯದಾಗಿರುವ ಆಧಾರ್ ಕಾರ್ಡನ್ನು ಇದೀಗ ಕೇಂದ್ರ ಸರ್ಕಾರವು ಅಪ್ಡೇಟ್ ಮಾಡಲು ತಿಳಿಸಿದ್ದು ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಹೆಸರು ಮೊಬೈಲ್ ನಂಬರ್ ಜನ್ಮ ದಿನಾಂಕ ಮನೆಯ ವಿಳಾಸ ಹೀಗೆ ಕೆಲವೊಂದು ಅಗತ್ಯ ಮಾಹಿತಿಗಳನ್ನು ಹೀಗಿರುವ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಸರ್ಕಾರದಿಂದ ಜಾರಿಯಾಗುವ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.
ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ ಆದರೆ ಪ್ರತಿ ಬಾರಿ ನಾವು ನಮ್ಮ ಫಿಂಗರ್ ಪ್ರಿಂಟ್ ಗಳು ಹಾಗೂ ಕಣ್ಣುಗಳ ಫೋಟೋಗಳನ್ನು ನೀಡುವುದರ ಮೂಲಕ ಆಧಾರ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಆದರೆ ಇದೀಗ ಆಧಾರ ಅಪ್ಡೇಟ್ ಮಾಡಿಸಲು ಮನೆಯಲ್ಲಿಯೇ ಮೊಬೈಲ್ ಬಳಸುವುದರ ಮೂಲಕ ಸುಲಭವಾಗಿ ಮಾಡಿಕೊಳ್ಳಬಹುದು.
ಇದನ್ನು ಓದಿ : ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದಿದ್ದರೆ ದಂಡ ವಿಧಿಸಲಾಗುತ್ತಿದೆ : ಕಟ್ಟುನಿಟ್ಟಿನ ಆದೇಶ
ಮೊಬೈಲ್ ಬಳಸಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ :
ಇದೀಗ ಮನೆಯಲ್ಲಿಯೇ ಕುಳಿತು ಮೊಬೈಲ್ ಬಳಸುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದಾಗಿದ್ದು ಯು ಐ ಡಿ ಎ ಐನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಮೈಆಧಾರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಅದಾದ ನಂತರ ನಿಮಗೆ ಅಪ್ಡೇಟ್ ಆಧಾರ್ ಎಂಬ ಆಯ್ಕೆ ಕಾಣುತ್ತದೆ ಅದರಲ್ಲಿ ನೀವು ನಿಮ್ಮ ಆಧಾರ್ ನಂಬರ್ ಹಾಗೂ ಆಧಾರ್ ಸಂಖ್ಯೆಗೆ ನೋಂದಣಿ ಯಾಗಿರುವ ಮೊಬೈಲ್ ನಂಬರನ್ನು ಸಹ ನಮೂದಿಸಬೇಕು.
ನಿಮಗೆ ಸೆಂಡ್ ಒಟಿಪಿ ಎಂಬ ಬಟನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ನಿಮಗೆ otp ಬರುತ್ತದೆ ಒಟಿಪಿಯನ್ನು ನಮೂದಿಸಿದ ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಯಾವ ಮಾಹಿತಿಯನ್ನು ನವೀಕರಿಸಬೇಕು ಆ ಮಾಹಿತಿಯನ್ನು ಆಯ್ಕೆ ಮಾಡುವುದರ ಮೂಲಕ ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ. ಹೀಗೆ 15 ದಿನಗಳ ಒಳಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಾಹಿತಿಗಳು ಅಪ್ಡೇಟ್ ಆಗುತ್ತವೆ.
ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಇದೀಗ ಸುಲಭವಾಗಿ ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ಎಲ್ಲರಿಗೂ ಸಹ ತಿಳಿಸುವುದರ ಮೂಲಕ ಅವರು ಕೂಡ ಸ್ಥಳೀಯ ಆಧಾರ್ ಕೇಂದ್ರಕ್ಕೆ ಹೋಗುವುದರ ಬದಲು ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದಿಂದ ಈ ಮೂರು ರಾಶಿಯವರ ಹಣ ಕಾಸು ಜೀವನ ವೃದ್ಧಿಯಾಗಲಿದೆ
- ಯುವನಿಧಿ ಯೋಜನೆಯ ಜಾರಿ ಯಾವ ದಾಖಲೆ ಬೇಕು ತಿಳಿದುಕೊಳ್ಳಿ ತಿಂಗಳಿಗೆ -3000