News

ಹೊಸ ವರ್ಷದಂದು ಯುವಜನತೆಗೆ 3000 ಹಣ ಸಿಗುತ್ತೆ : ತಪ್ಪದೆ ಅರ್ಜಿ ಸಲ್ಲಿಸಿ

Young people get money on New Year

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರದ ಐದನೇ ಚುನಾವಣಾ ಖಾತರಿ ಯೋಜನೆಯಾದ ಯುವ ನಿಧಿ ಯೋಜನೆ ಬಗ್ಗೆ ತಿಳಿಸಲಾಗುತ್ತದೆ. ಡಿಸೆಂಬರ್ 26ರಿಂದ ಯುವ ನಿಧಿ ಯೋಜನೆಗೆ ನೋಂದಣಿ ಪ್ರಾರಂಭ ಶುರುವಾಗಿದ್ದು ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮೋದರರು ಜನವರಿಯಿಂದ ಹಣವನ್ನು ಪಡೆಯಬಹುದಾಗಿದೆ. ಇದರ ಬಗ್ಗೆ ವೈದ್ಯಕೀಯ ಸಚಿವರು ಸಹ ಘೋಷಣೆ ಹೊರಡಿಸಿದ್ದಾರೆ.

Young people get money on New Year
Young
get money on New Year

ಸರ್ಕಾರದಿಂದ ಹಣಕಾಸಿನ ನೆರವು :

ಅರ್ಹ ವ್ಯಕ್ತಿಗಳಿಗೆ ಸುಮಾರು ಎರಡು ವರ್ಷಗಳವರೆಗೆ ಯುವ ನಿಧಿ ಯೋಜನೆಯ ಅಡಿಯಲ್ಲಿ ಮಾಸಿಕ ಹಣಕಾಸಿನ ನೆರವನ್ನು ಸರ್ಕಾರವು ನೀಡಲು ನಿರ್ಧರಿಸಿದೆ. ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ತಿಳಿಸಿದ್ದು ಯುವ ನಿಧಿ ಯೋಜನೆಯ ಲೋಗೋ ಮತ್ತು ನೋಂದಣಿಯನ್ನು ಡಿಸೆಂಬರ್ 26ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

250 ಕೋಟಿ ಅನುದಾನ :

ಸ್ವಾಮಿ ವಿವೇಕಾನಂದರ ಜನ್ಮದಿನದ ಜೊತೆಗೆ ಜನವರಿ 12ರಂದು ಸರ್ಕಾರದ 5ನೇ ಗ್ಯಾರಂಟಿ ಯೋಜನೆಯ ಮೂಲಕ ನಿರುದ್ಯೋಗ ಪದವೀಧರ ಹಾಗೂ ಡಿಪ್ಲೋಮೋದರರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. 250 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಈ ವರ್ಷ ಮೀಸಲಿಟ್ಟಿದ್ದು ಸುಮಾರು 5.3 ಲಕ್ಷ ಪದವೀಧರರು ಮತ್ತು ಡಿಪ್ಲೋಮೋ ಹೊಂದಿರುವವರು 2022-2023 ಶೈಕ್ಷಣಿಕ ವರ್ಷದಲ್ಲಿ ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರೆಂದು ರಾಜ್ಯ ಸರ್ಕಾರವು ಗುರುತಿಸಿದೆ.

ಇದನ್ನು ಓದಿ : ಉಚಿತ ಬಸ್ ಪ್ರಯಾಣ ಮಾಡುವವರಿಗೆ ಹೊಸ ನಿಯಮ : ಸರ್ಕಾರದಿಂದ ಮಹತ್ವದ ಬದಲಾವಣೆ

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು :


ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ನ ಮೂಲಕ ಅಥವಾ ಕರ್ನಾಟಕವನ್ನು ಬೆಂಗಳೂರು ಒನ್ ಗ್ರಾಮ ಒನ್ ಮತ್ತು ಬಾಪೂಜಿ ಸೇವ ಕೇಂದ್ರಗಳಲ್ಲಿ ಉಚಿತವಾಗಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ ಆರು ವರ್ಷಗಳ ಕಾಲ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕರ್ನಾಟಕದಲ್ಲಿ ವಾಸವಿರಬೇಕು.

ಹೀಗೆ ರಾಜ್ಯ ಸರ್ಕಾರವು ಯುವ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಮಾಹಿತಿಯನ್ನು ತಿಳಿಸಿದ್ದು ಜನವರಿಯಿಂದ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗುತ್ತಿದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...