ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಜೆಡ್ ಸ್ಕಾಲರ್ಶಿಪ್ ಬಗ್ಗೆ ತಿಳಿಸಲಾಗುತ್ತಿದೆ. ಜೆಡ್ ಎಸ್ ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜೆಡ್ ಸ್ಕಾಲರ್ಸ್ ಪ್ರೋಗ್ರಾಮ್ 202324ನೇ ಸಾಲಿನಲ್ಲಿ ನೀಡುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಅದರಂತೆ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳು ಬೇಕು ಹಾಗು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಜೆಡ್ ಸ್ಕಾಲರ್ ವಿದ್ಯಾರ್ಥಿ ವೇತನ :
ಝೆಡ್ ಸ್ಕಾಲರ್ಸ್ ಕಾರ್ಯಕ್ರಮದ ಅಡಿಯಲ್ಲಿ ವರ್ಷಕ್ಕೊಮ್ಮೆ 20,000ಗಳ ಹಣವನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಜೆಡ್ ಎಸ್ ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಹ್ವಾನ ಮಾಡಲಾಗಿದ್ದು ಡಿಗ್ರಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಝೆಡ್ ಸ್ಕಾಲರ್ಶಿಪ್ನ ಅರ್ಹತೆಗಳು :
ನೀವೇನಾದರೂ ಬೆಂಗಳೂರು ಪುಣೆ ದೆಹಲಿ ಹಾಗೂ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಹಾಗೂ ಬಿಕಾಂ ಬಿಎಸ್ಸಿ ಬಿಎ ಕೋರ್ಸ್ ಗಳನ್ನು ಮೊದಲನೇ ವರ್ಷದಲ್ಲಿ ಓದುತ್ತಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸುಮಾರು 20 ಸಾವಿರ ರೂಪಾಯಿಗಳವರೆಗೆ ವರ್ಷಕ್ಕೆ ಒಂದು ಬಾರಿ ಈ ವಿದ್ಯಾರ್ಥಿ ವೇತನದಿಂದ ಹಣವನ್ನು ನೀಡಲಾಗುತ್ತದೆ. 12ನೇ ತರಗತಿಯಲ್ಲಿ ಶೇಕಡ 60% ರಷ್ಟು ಕನಿಷ್ಠ ಫಲಿತಾಂಶವನ್ನು ಹೊಂದಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ಗೃಹ ಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣವನ್ನು ಪಡೆಯಲು ಹೊಸ ಷರತ್ತು
ವಿದ್ಯಾರ್ಥಿ ವೇತನದ ಮೊತ್ತ :
ಪದವಿ ಪೂರ್ವ ಡಿಗ್ರಿ ಅಂತಹ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಓದುತ್ತಿದ್ದರೆ ವರ್ಷಕ್ಕೊಮ್ಮೆ 20,000ಗಳನ್ನು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಜಮಾ ಮಾಡಲಾಗುತ್ತದೆ. ವೃತ್ತಿಪರ ಕೋರ್ಸ್ಗಳನ್ನು ಮಾಡುತ್ತಿದ್ದರೆ ಸುಮಾರು ಐವತ್ತು ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದಾಗಿದೆ. ಡಿಸೆಂಬರ್ 15 ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು , ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಹೀಗೆ ಜೆಡ್ ಸ್ಕಾಲರ್ ನ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೇರ್ ಮಾಡಿದ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದ ಆದೇಶ; ಆಧಾರ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಅವಕಾಶ, ಕೂಡಲೇ ಈ ಕೆಲಸ ಮಾಡಿ
- UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ